Friday, May 10, 2024
spot_imgspot_img
spot_imgspot_img

ಸ್ನಾನ ಮಾಡಲು ನದಿಗೆ ತೆರಳಿದ್ದ ಇಬ್ಬರು ಬಾಲಕರು ನೀರುಪಾಲು..!

- Advertisement -G L Acharya panikkar
- Advertisement -

ಸ್ನಾನ ಮಾಡಲು ತೆರಳಿದ ಇಬ್ಬರು ಬಾಲಕರು ನದಿ ಪಾಲಾದ ಘಟನೆ ವಿಜಯಪುರದಲ್ಲಿ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಕಾರಜೋಳ ಗ್ರಾಮದ ಸುದೀಪ (ಪಪ್ಪು) ದೊಡ್ಡಮನಿ (12), ಶ್ರೀಧರ ದೊಡ್ಡಮನಿ (10) ಎಂಬ ಬಾಲಕರು ನದಿಪಾಲಾಗಿದ್ದಾರೆ.

ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ಆಯೋಜನೆ ಆಗಿತ್ತು. ಕಾರಜೋಳ ಗ್ರಾಮದಿಂದ ಕೃಷ್ಣಾ ನದಿಗೆ ದೇವಿಯ ಪಲ್ಲಕ್ಕಿ ಹೊತ್ತು, ದೇವಿಯ ಸ್ನಾನ ಮಾಡಿಸಿಕೊಂಡು ಬರಲು ಗ್ರಾಮಸ್ಥರು ತೆರಳಿದ್ದರು.

ಮೃತಬಾಲಕರು ತಂದೆ-ತಾಯಿಗಳ ಜೊತೆ ನದಿಗೆ ತೆರಳಿದ್ದ ವೇಳೆಯೇ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯರ ಸಹಾಯದಿಂದ ಇಬ್ಬರು ಬಾಲಕರ ಶವ ಹೊರಕ್ಕೆ ತೆಗೆಯಲಾಗಿದೆ. ಕೊಲ್ಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Related news

error: Content is protected !!