Saturday, June 28, 2025
spot_imgspot_img
spot_imgspot_img

ನದಿಗೆ ತೆರಳಿದ್ದ ಇಬ್ಬರು ಬಾಲಕಿಯರು ನೀರುಪಾಲು..!

- Advertisement -
- Advertisement -

ಕಲಬುರಗಿ: ಬಟ್ಟೆ ಒಗೆಯಲು ನದಿಗೆ ತೆರಳಿದ್ದ ಬಾಲಕಿಯರಿಬ್ಬರು ನೀರುಪಾಲಾಗಿರುವ ಘಟನೆ ಅಫ್ಝಲ್ ಪುರ ತಾಲೂಕಿನ ಬನ್ನಹಟ್ಟಿ ಗ್ರಾಮದಲ್ಲಿ ನಡೆದಿದೆ.

ನೀರುಪಾಲಾದ ಬಾಲಕಿಯರನ್ನು ಬನ್ನಹಟ್ಟಿ ಗ್ರಾಮದ ಭೂಮಿಕಾ(8) ಮತ್ತು ಶ್ರಾವಣಿ(11) ಎಂದು ಗುರುತಿಸಲಾಗಿದೆ.

ಬಟ್ಟೆ ಒಗೆಯಲು ತೆರಳಿದ್ದ ಬಾಲಕಿಯರಿಬ್ಬರು ನದಿಯಲ್ಲಿ ಈಜಾಡಲು ಮುಂದಾಗಿದ್ದರು. ಈ ವೇಳೆ ಭೂಮಿಕಾ ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಅವಳನ್ನು ಶ್ರಾವಣಿ ರಕ್ಷಿಸಲು ಮುಂದಾಗಿದ್ದಾಳೆ ಎನ್ನಲಾಗಿದೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ ಭೂಮಿಕಾ ಮತ್ತು ಶ್ರಾವಣಿ ಇಬ್ಬರು ನೀರುಪಾಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದು, ಶ್ರಾವಣಿಯ ಮೃತದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ. ಭೂಮಿಕಾಳಿಗಾಗಿ ಶೋಧ ಮುಂದುವರಿದಿದೆ.ಈ ಬಗ್ಗೆ ಅಫ್ಝಲ್ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!