- Advertisement -
- Advertisement -


ಸುಳ್ಯ : ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹಿಂದೂ ಯುವತಿಯೊಂದಿಗೆ ಇಬ್ಬರು ಅನ್ಯಮತೀಯ ಯುವಕರು ಹೋಗುತ್ತಿದ್ದಾರೆಂಬ ಮಾಹಿತಿಯನ್ನು ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರನ್ನು ಸುಳ್ಯದಲ್ಲಿ ತಡೆದ ಘಟನೆ ವರದಿಯಾಗಿದೆ.
ಮುಳ್ಳೇರಿಯಾ ಕಡೆಯಿಂದ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ, ಇಬ್ಬರು ಹುಡುಗರು ಹಾಗೂ ಒಬ್ಬಳು ಹುಡುಗಿ ಇದ್ದಳು. ಕಾರನ್ನು ಸುಳ್ಯದಲ್ಲಿ ನಿಲ್ಲಿಸಿದ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸುತಿದ್ದಾರೆಂದು ತಿಳಿದುಬಂದಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದ್ದಾರೆ ಎಂದು ವರದಿಯಾಗಿದೆ.
- Advertisement -