- Advertisement -
- Advertisement -



ಯುವತಿಯೊಬ್ಬಳು ತನ್ನ ಸ್ಕೂಟರ್‌ನೊಂದಿಗೆ ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ತಿರುವನಂತಪುರ: ರಾಷ್ಟ್ರೀಯ ಹೆದ್ದಾರಿಯ ವೆಂಪಾಲವಟ್ಟದಲ್ಲಿ ನಡೆದಿದೆ.
ಕೋವಲಂ ವೆಲ್ಲರ್ ಮೂಲದ ಸಿಮಿ (35) ಮೃತರು.
ಸಿಮಿ ಅವರ ಪುತ್ರಿ ಶಿವನ್ಯಾ (3) ಮತ್ತು ಸಹೋದರಿ ಸಿನಿ (32) ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಈ ವೇಳೆ ಮೂವರು ಪ್ರಯಾಣಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು, ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸಿಮಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
- Advertisement -