Friday, April 26, 2024
spot_imgspot_img
spot_imgspot_img

ಕೇಂದ್ರ ಬಜೆಟ್ 2022: ಬಜೆಟ್’ನ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ

- Advertisement -G L Acharya panikkar
- Advertisement -

ನವದೆಹಲಿ: ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಇದಾಗಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ನಿರ್ಮಲಾ ಸೀತಾರಾಮನ್ ಮಂಡಿಸಿದ ನಾಲ್ಕನೇ ಬಜೆಟ್ ಆಗಿದೆ.

ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಪ್ರಾರಂಭಿಸಿದರು. ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದರು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಗಳವಾರ ಕಳೆದ ವರ್ಷದಂತೆ ಕಾಗದರಹಿತ ರೂಪದಲ್ಲಿ 2022-23ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದು, ಕೇಂದ್ರ ಬಜೆಟ್ ಪ್ರಮುಖ ಅಂಶಗಳಲ್ಲಿನ ಪಟ್ಟಿಯನ್ನು ಇಲ್ಲಿ ಓದಿ.

ಕೇಂದ್ರ ಬಜೆಟ್ ಪ್ರಮುಖ ಅಂಶಗಳ ಪಟ್ಟಿ:

  • ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ
  • 2022-23ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 80 ಲಕ್ಷ ಮನೆಗಳ ನಿರ್ಮಾಣ
  • ಬಂಡವಾಳ ಸರಕುಗಳ ಆಮದಿನ ಮೇಲಿನ ರಿಯಾಯಿತಿ ಸುಂಕವನ್ನು ಹಂತಹಂತವಾಗಿ ರದ್ದುಗೊಳಿಸಲಾಗುವುದು
  • ಸ್ಟಾರ್ಟ್-ಅಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಮಾರ್ಚ್ 2023 ರವರೆಗೆ ವಿಸ್ತರಣೆ
  • 2022-23 ರಿಂದ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿಕೊಂಡು ಆರ್‌ಬಿಐ ಡಿಜಿಟಲ್ ರೂಪಾಯಿ ಪರಿಚಯಿಸಲು ಪ್ರಸ್ತಾಪ
  • ಕೃಷಿ ಅರಣ್ಯ ಬೆಳೆಸಲು ರೈತರಿಗೆ ಆರ್ಥಿಕ ನೆರವು ನೀಡಲಾಗುವುದು
  • ದೇಶೀಯ ನಿಯಂತ್ರಣದಿಂದ ಮುಕ್ತವಾದ GIFT IFSC ನಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯಕ್ಕೆ ಅನುಮತಿ
  • ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡುವುದು
  • 2022-23 ರೊಳಗೆ 5G ಮೊಬೈಲ್ ಸೇವೆಗಳು ಬಿಡುಗಡೆ

ಯಾವುದರ ಬೆಲೆ ಇಳಿಕೆ..?

  • 39.54 ಲಕ್ಷ ಕೋಟಿ ಬಜೆಟ್​ ಮಂಡಿಸಿದ ವಿತ್ತ ಸಚಿವೆ
  • ಡೀಸೆಲ್ ಇಳಿಕೆ ಸಾಧ್ಯತೆ
  • ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನ ಬೆಲೆ ಇಳಿಕೆ
  • ವೈದ್ಯಕೀಯ ಉಪಕರಣ, ಶ್ರವಣ ಸಾಧನಗಳು
  • ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
  • ಮೊಬೈಲ್, ಚಾರ್ಜರ್​ಗಳ ಬೆಲೆಯಲ್ಲಿ ಇಳಿಕೆ
  • ಕೃಷಿ ಉಪಕರಣಗಳ ಬೆಲೆಯಲ್ಲಿ ಇಳಿಕೆ
  • ರಾಸಾಯನಿಕ ಉತ್ಪನ್ನಗಳು
  • ವಜ್ರದ ಆಭರಣ-ಹರಳು ವಜ್ರದ ಮೇಲೆ ಶೇ.4ರಷ್ಟು ಸುಂಕ ಕಡಿತ
  • ಆರ್ಟಿಫಿಶಿಯಲ್ ಆಭರಣಗಳ ಮೇಲಿನ ಸುಂಕ ಕಡಿತ
  • ವೈದ್ಯಕೀಯ ಸಾಧನಗಳು ಮತ್ತು ಔಷಧಗಳು
  • ತಾಳೆ ಎಣ್ಣೆ, ಕಾಸ್ಮೇಟಿಕ್ಸ್, ಎಲೆಟ್ರಾನಿಕ್​ ಉಪಕರಣ
  • ಪೀಠೋಪಕರಣಗಳು, ಪ್ಯಾಕೇಜಿಂಗ್‌ ಬಾಕ್ಸ್‌ಗಳು
  • ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್.
  • ಕರಕುಶಲ ವಸ್ತುಗಳು

ಯಾವುದು ದುಬಾರಿ..?

  • ಪೆಟ್ರೋಲ್ ಇನ್ನಷ್ಟು ದುಬಾರಿ
  • ಸಿಗರೇಟ್​, ಡಿಜಿಟಲ್ ಸಿಗಾರ್ ಕೂಡ ದುಬಾರಿ
  • ಎಥೆನಾಲ್ ಮಿಶ್ರಿತ ತೈಲ ಆಮದಿಗೆ ಹೆಚ್ಚು ಸುಂಕ
  • ಚಿನ್ನದ ಬೆಲೆ ಇಳಿಕೆ ಆಗೋದಿಲ್ಲ
  • ಛತ್ರಿ ಬೆಲೆ ಹೆಚ್ಚಳ.. ಛತ್ರಿಗಳ ಮೇಲಿನ ಸುಂಕವನ್ನು ಶೇ.20ಕ್ಕೆ ಏರಿಸಲಾಗಿದೆ.
vtv vitla
vtv vitla
- Advertisement -

Related news

error: Content is protected !!