Saturday, June 28, 2025
spot_imgspot_img
spot_imgspot_img

ಇಬ್ಬರು ಪುತ್ರಿಯರಿಗೆ ಲೈಂಗಿಕ ದೌರ್ಜನ್ಯ: ತಂದೆಗೆ ಜೀವಾವಧಿ ಜೈಲು ಶಿಕ್ಷೆ!!

- Advertisement -
- Advertisement -

ಉಡುಪಿ: ಒಂದು ವರ್ಷಗಳ ಹಿಂದೆ ತನ್ನಿಬ್ಬರು ಪುತ್ರಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ ತಂದೆಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಜೀವಮಾನ ಪರ್ಯಂತ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.ಉಡುಪಿಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕಟಿಸಿರುವ ಪ್ರಥಮ ಘೋರ ಶಿಕ್ಷೆ ಇದಾಗಿದೆ.

ಆರೋಪಿಯ ತನ್ನ 14 ವರ್ಷ ಪ್ರಾಯದ ಕಿರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ . ಇದನ್ನು 16 ವರ್ಷ ಪ್ರಾಯದ ಹಿರಿಯ ಮಗಳು ವಿರೋಧಿಸಿದ್ದಳು. ಆದರೆ ಆರೋಪಿ ತನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ಆರಂಭಿಸಿದ್ದ.

ಈತನ ಪತ್ನಿ ಮಾನಸಿಕ ಖಿನ್ನರಾಗಿದ್ದು ಬಳಿಕ ಮೃತಪಟ್ಟಿದ್ದರು.ಈ ಬಗ್ಗೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದಿದ್ದು. ಅದರಂತೆ ಘಟಕದ ಕಾನೂನು ಪರಿ ವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ಹೆಬ್ರಿ ಠಾಣೆಯಲ್ಲಿ 2019 ಅಕ್ಟೋಬರ್ ತಿಂಗಳಿನಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

- Advertisement -

Related news

error: Content is protected !!