Tuesday, May 14, 2024
spot_imgspot_img
spot_imgspot_img

ಉಡುಪಿ: ವೆಂಕಟೇಶ್ವರ ಸ್ವೀಟ್ಸ್ ಮಾಲಕ ಪಿ.ಲಕ್ಷ್ಮಿನಾರಾಯಣ ರಾವ್ ಅವರ ಸಾರಥ್ಯದಲ್ಲಿ 13ನೇ ವರ್ಷದ ತಿರುಪತಿ ಪಾದಯಾತ್ರೆ

- Advertisement -G L Acharya panikkar
- Advertisement -

ವೆಂಕಟೇಶ್ವರ ಸ್ವೀಟ್ಸ್ ಉಡುಪಿ ಇದರ ಮಾಲಕರದ ಪಿ.ಲಕ್ಷ್ಮಿನಾರಾಯಣ ರಾವ್ ಅವರ ಸಾರಥ್ಯದಲ್ಲಿ ಸತತವಾಗಿ 13 ನೇ ವರ್ಷದ ಸಾಸ್ತನದಿಂದ ತಿರುಪತಿ ಪಾದಯಾತ್ರೆಯು ಆಗಸ್ಟ್ 22 ರಿಂದ(ಪ್ರತಿ ವರ್ಷದಂತೆ ನಾಗರ ಪಂಚಮಿಯ ಮರುದಿನ) ಆರಂಭಗೊಂಡು 18 ದಿನ ಈ ಪಾದಯಾತ್ರೆಯು ಕ್ರಮಿಸಲಿರುವುದು.

ಮೊದಲ ದಿನ ಹಿರಿಯಡ್ಕ ನಾರಾಯಣಗುರು ಸಭಾಭವನದಲ್ಲಿ ಉಳಿದುಕೊಂಡು, ಹಾಗೆಯೇ ಒಂದೊಂದು ದಿನ ಒಂದೊಂದು ಸ್ಥಳದಲ್ಲಿ ಉಳಿದು, ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಶ್ರೀನಿವಾಸ ಮಂಗಾಪುರದಿಂದ ತಿರುಪತಿ ತಲುಪಿ, ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯುವುದು.

ಈ ಪಾದಯಾತ್ರೆಯಲ್ಲಿ ಸರಿಸುಮಾರು 200 ಪಾದಯಾತ್ರಿಗಳು ಒಟ್ಟಿಗೆ ಹೋಗುವರು, ತಿರುಪತಿ ತಲುಪುವ ತನಕ 18 ದಿನದ ಎಲ್ಲಾ ಖರ್ಚು ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ, ಉಳಿಯುವ ವ್ಯವಸ್ಥೆ, ವೆಂಕಟೇಶ್ವರ ಸ್ವೀಟ್ಸ್ ವತಿಯಿಂದನೇ ಮಾಡುತ್ತಾರೆ. 200 ಪಾದಯಾತ್ರೆಯವರು ಲಕ್ಷ್ಮೀ ನಾರಾಯಣ್ ರಾವ್ ಅವರ ಮನೆಯಲ್ಲಿ, ಅವರಿಂದ ಬಟ್ಟೆಗಳನ್ನು ಸ್ವೀಕರಿಸಿ ಅಲ್ಲಿಂದ ಒಟ್ಟಿಗೆ ಹೊರಡುವರು.

Insta: glacharyajewellers
Fb: glacharya
- Advertisement -

Related news

error: Content is protected !!