Friday, March 29, 2024
spot_imgspot_img
spot_imgspot_img

ಉಡುಪಿ: ಶ್ರಮಿಕ ತರುಣರ ತಂಡದ ವತಿಯಿಂದ 2 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್‌ ವಿತರಣೆ!

- Advertisement -G L Acharya panikkar
- Advertisement -

ಉಡುಪಿ: ವಿಶ್ವವ್ಯಾಪಿ ಆವರಿಸಿದ ಈ ಕೊರೋನಾ ಮಹಾಮಾರಿಯು ಜನಸಾಮಾನ್ಯರ ಜೀವನದಲ್ಲಿ ಆಘಾತಕಾರಿ ಪರಿಣಾಮವನ್ನುಂಟು ಮಾಡಿದ್ದು, ಮಧ್ಯಮ ವರ್ಗದ ಜನರು ಕೆಲಸ ಕಾರ್ಯ ಇಲ್ಲದೆ ಕಣ್ಣೀರಿಡುವಂತಾಗಿದೆ.

ಶ್ರಮಿಕ ತಂಡವು ಈ ಬಗ್ಗೆ ಆಸಕ್ತಿ ವಹಿಸಿ ಸಣ್ಣ ಪರಿಶ್ರಮದಿಂದ ವೃದ್ಧ ದಂಪತಿ ಕುಟುಂಬ, ಅಂಗವಿಕಲ ಸದಸ್ಯ ಇರುವ ಕುಟುಂಬ, ಹೋಟೆಲ್ ಕಾರ್ಮಿಕರು, ಪೌರ ಕಾರ್ಮಿಕರು, ಕೆಲಸ ಇಲ್ಲದೆ ಅಶಕ್ತಗೊಂಡ ಪರಿವಾರ, ಆಶಾ ಕಾರ್ಯಕರ್ತೆಯರು, ಸೋಂಕಿತ ಕುಟುಂಬ ಮತ್ತು ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸಹಾಯ ಹಸ್ತದೊಂದಿಗೆ ಸೇವೆ ಮಾಡಿದೆ.

ಗೌರವಾಧ್ಯಕ್ಷ ಸಂತೋಷ್ ಕುಮಾರ್ ಬೈರಂಪಳ್ಳಿ ಮತ್ತು ಅಧ್ಯಕ್ಷ ಪ್ರಕಾಶ್ ಕುಲಾಲ್ ನೇತೃತ್ವದ ಸರ್ವ ಸದಸ್ಯರ ತಂಡವು ಕಾರ್ಯಕೈಗೊಂಡು ಪರಿಚಿತ ದಾನಿಗಳ ನೆರವಿನಿಂದ ಹಾಗೂ ಶ್ರಮಿಕ ತಂಡದ ಅನುದಾನವನ್ನು ಒಟ್ಟುಗೂಡಿಸಿ 2 ಲಕ್ಷ ಮೌಲ್ಯದ 200 ಆಹಾರ ಮತ್ತು ದಿನ ಬಳಕೆ ಸಾಮಗ್ರಿಗಳ ಕಿಟ್‌ಗಳನ್ನು ತಯಾರಿಸಿ ಬೈರಂಪಳ್ಳಿ, ಶಿವಪುರ, ಕುಕ್ಕೆಹಳ್ಳಿ, ಪೆರ್ಡೂರು ವ್ಯಾಪ್ತಿಯ ಕುಟುಂಬಗಳಿಗೆ ವಿತರಿಸಲಾಯಿತು. ಈ ಕಾರ್ಯದಲ್ಲಿ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

- Advertisement -

Related news

error: Content is protected !!