Sunday, June 14, 2026
spot_imgspot_img
spot_imgspot_img

ಉಡುಪಿ: ಸ್ಥಳೀಯರ ಮಾತನ್ನು ನಿರ್ಲಕ್ಷಿಸಿ ಸಮುದ್ರಕ್ಕೆ ಇಳಿದು ಮುಳುಗಿದ ನಾಲ್ಕು ಯುವಕರು

- Advertisement -
- Advertisement -

ಉಡುಪಿ: ಕಾಪು ಬೀಚ್​ನಲ್ಲಿ ಮುಳುಗುತ್ತಿದ್ದ ನಾಲ್ವರು ಯುವಕರನ್ನ ಬೀಚ್ ಸುರಕ್ಷಾ ಸಿಬ್ಬಂದಿ ರಕ್ಷಿಸಿದ್ದಾರೆ. ಸಂಜೆ ಬೀಚ್​​ನಲ್ಲಿ ಆಟವಾಡಲು ತೆರಳಿದ್ದ ಮೈಸೂರು ಮೂಲದ ಪರಶಿವ, ತೇಜಸ್, ರಾಹುಲ್ ಮತ್ತು ಪವನ್ ಸ್ಥಳೀಯರ ವಿರೋಧದ ನಡುವೆಯೂ ಸಮುದ್ರಕ್ಕೆ ಇಳಿದಿದ್ದರು. ಅಪಾಯಕಾರಿ ಅಲೆಗಳ ಬಗ್ಗೆ ಎಚ್ಚರಿಸಿದರೂ ನಿರ್ಲಕ್ಷ್ಯ ವಹಿಸಿದ್ದರಿಂದ, ಆಟವಾಡುತ್ತಿದ್ದ ಯುವಕರ ತಂಡ ಏಕಾಏಕಿ ನೀರಿನಲ್ಲಿ ಮುಳುಗಿದೆ.

ಯುವಕರು ಮುಳುಗುತ್ತಿದ್ದುದನ್ನು ಕಂಡ ಪ್ರಥಮ್ ಪ್ರಶಾಂತ್ ಕರ್ಕೇರಾ, ಪ್ರದೀಪ್, ಜೇಕ್ಸನ್​ರವರು ಅಬ್ಬರದ ಸಮುದ್ರದ ಅಲೆಗಳನ್ನೂ ಲೆಕ್ಕಿಸದೆ ಧುಮುಕಿ ನಾಲ್ವರನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರವಾಸಿ ಯುವಕರ ಜೀವ ಉಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಡಲಿನಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Related news

error: Content is protected !!