Sunday, June 30, 2024
spot_imgspot_img
spot_imgspot_img

ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ; ತಪ್ಪಿದ ಅನಾಹುತ..!

- Advertisement -G L Acharya panikkar
- Advertisement -

ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ರಿಟ್ಜ್ ಕಾರು ಬೆಂಕಿಗಾಹುತಿಯಾಗಿ ಅನಾಹುತವೊಂದು ತಪ್ಪಿದ ಘಟನೆ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ತಡರಾತ್ರಿ ನಡೆದಿದೆ.

ಕಾರು ಚಾಲಕ ಸೇರಿ ಇನ್ನೋರ್ವ ವ್ಯಕ್ತಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಅದರೊಳಗೆ ಮಲಗಿದ್ದರು. ಈ ವೇಳೆ ಕಾರು ಚಾಲಕನಿಗೆ ಕಾರಿನ ಬಾನೆಟ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕಾರಿನಿಂದ ಹೊರಬಂದಿದ್ದಾರೆ.

ಬೆಂಕಿಯ ಕೆನ್ನಾಲೆಗೆ ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನು ಕಾರು ಮಾಲೀಕನ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

- Advertisement -

Related news

error: Content is protected !!