Saturday, June 6, 2026
spot_imgspot_img
spot_imgspot_img

ಉಡುಪಿ: ಶೋರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಕಾರು ಬಸ್‌ಗೆ ಡಿಕ್ಕಿ..!

- Advertisement -
- Advertisement -

ಉಡುಪಿ: ಕುಂದಾಪುರ ಶೋರೂಂನಿಂದ ಮಂಗಳೂರು ಶೋರೂಂನತ್ತ ಹೊಸ ಫಾರ್ಚೂನರ್ ಕಾರನ್ನು ಕೊಂಡೊಯ್ಯುತ್ತಿದ್ದ ವೇಳೆ ಕಾರು ಚಾಲಕ ನಿಲ್ಲಿಸಿದ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯಲ್ಲಿನಡೆದಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಹೊಚ್ಚ ಹೊಸ ಫಾರ್ಚೂನರ್ ಕಾರು ನಜ್ಜು ಗುಜ್ಜಾಗಿದೆ. ಕಾರನ್ನು ಕುಂದಾಪುರ ಶೋರೂಂ ನಿಂದ ಮಂಗಳೂರು ಶೋರೂಂಗೆ ಚಾಲಕ ಕೊಂಡೊಯ್ಯುತ್ತಿದ್ದ .

ಉಡುಪಿ ಸಮೀಪದ ನಿಟ್ಟೂರು ಬಳಿ ಹೋಗುತ್ತಿದ್ದಂತೆ ಕಾರು ಚಾಲಕನ ನಿರ್ಲಕ್ಷ್ಯ ದಿಂದ ರಸ್ತೆ ಬದಿ ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿದ್ದ ಬಸ್ ಗೆ ಢಿಕ್ಕಿ ಹೊಡೆದಿದೆ. ಘಟನೆ ಬಳಿಕ ಕೆಲಹೊತ್ತು ರಾಷ್ಟ್ರೀ ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯ ಸ್ತಗೊಂಡಿತು. ವಿಷಯ ತಿಳಿದು ಕಾರು ಶೋರೂಂ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದರು.

- Advertisement -

Related news

error: Content is protected !!