Wednesday, June 24, 2026
spot_imgspot_img
spot_imgspot_img

ಉಡುಪಿ: ಬಿಜೆಪಿ ಮುಖಂಡರೊಬ್ಬರ ಮೇಲೆ ಹಲ್ಲೆಗೆ ಯತ್ನ!

- Advertisement -
- Advertisement -

ಉಡುಪಿ: ಪರಿಚಿತರಿಂದಲೇ ಬಿಜೆಪಿಯ ಮುಖಂಡರೊಬ್ಬರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಹಲ್ಲೆಗೊಳಗಾದವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ಲಿನಲ್ಲಿರುವ ಸಾಯಿಬಾಬಾ ಬೇಕರಿ ಮಾಲಕರಾದ ಗಣೇಶ್ ಶೆಟ್ಟಿ.

ರಾತ್ರಿ ಬೇಕರಿ ಮುಚ್ಚಿ ಗಣೇಶ್ ಶೆಟ್ಟಿಯವರು ಮನೆಗೆ ಹೊರಡುವ ವೇಳೆ, ಪರಿಚಿತರೇ ಆಗಿದ್ದ ಸ್ಟೀಫನ್ ಮೇಂಡೋನ್ಸಾ ಮತ್ತು ಚರಣ್ ಶೆಟ್ಟಿ ಎಂಬವರು ಮೋಟಾರ್ ಸೈಕಲ್‍’ನಲ್ಲಿ ಬಂದು ಮಾತಿನ ಚಕಮಕಿ ನಡೆದಿದ್ದು, ಗಣೇಶ್ ರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಣೇಶ್ ಆಯತಪ್ಪಿ ನೆಲಕ್ಕೆ ಬಿದ್ದಿದ್ದು, ಸ್ಟೀಫನ್ ಮೇಂಡೋನ್ಸಾ ಮತ್ತು ಚರಣ ಶೆಟ್ಟಿ ಇಬ್ಬರೂ ಬೈಕ್ ನಲ್ಲಿ ತಂದಿದ್ದ ತಲವಾರಿನಿಂದ ಹೊಡೆಯಲು ಮುಂದಾಗಿದ್ದಾರೆ. ಗಣೇಶ್‍ ಕಿರುಚಾಟದಿಂದ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಸ್ಟೀಫನ್ ಮೇಂಡೋನ್ಸಾ ಮತ್ತು ಚರಣ್ ಶೆಟ್ಟಿಗೆ ಹಿಗ್ಗಾಮುಗ್ಗ ಹೊಡೆದು ಪೊಲೀಸರಿಗೊಪ್ಪಿಸಿದ್ದಾರೆ. ಈ ಘಟನೆಯ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!