Friday, June 5, 2026
spot_imgspot_img
spot_imgspot_img

ಉಡುಪಿ: ಬೈರಂಪಳ್ಳಿ ಶ್ರಮಿಕ ತರುಣರ ತಂಡದ ವತಿಯಿಂದ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ವಿತರಣೆ

- Advertisement -
- Advertisement -

ಉಡುಪಿ: ಬೈರಂಪಳ್ಳಿ ಶ್ರಮಿಕ ತರುಣರ ತಂಡದ ಸಂಸ್ಥಾಪಕರು ಹಾಗೂ ಬೈರಂಪಳ್ಳಿ ಗ್ರಾ.ಪಂ.ಸದಸ್ಯರಾದ ಡಾ.ಸಂತೋಷ್ ಕುಮಾರ್ ಬೈರಂಪಳ್ಳಿಯವರ ನೇತೃತ್ವದಲ್ಲಿ ತಂಡದ ವತಿಯಿಂದ ಶಾಲಾ ಮಕ್ಕಳಿಗೆ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು 41ನೇ ಶೀರೂರು ಹಾಲಕ್ಕಿ ನ್ಯೂಕಲ್ಲಾಳ ಸ.ಕಿ.ಪ್ರಾ ಶಾಲೆಯಲ್ಲಿ ನಡೆಸಲಾಯಿತು.

2023-24ನೇ ಸಾಲಿನ ಶೈಕ್ಷಣಿಕ ವರ್ಷದ ಮಕ್ಕಳಿಗೆ ಪೂರ್ಣವರ್ಷಕ್ಕೆ ಬೇಕಾಗುವ ಪುಸ್ತಕಗಳು, ಪೆನ್ನು, ಪೆನ್ಸಿಲ್, ಕ್ರೇಯಾನ್ಸ್, ಬ್ಯಾಗು, ವಾಟರ್ ಬಾಟಲ್, ಅಂಬ್ರೆಲ್ಲಾ ಇತ್ಯಾದಿ ಎಲ್ಲಾ ಸಲಕರಣೆಗಳನ್ನು ಸುಮಾರು 40 ಸಾವಿರ ವೆಚ್ಚದಲ್ಲಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಉಮೇಶ್ ನಾಯಕ್ ಮತ್ತು ಶಿಕ್ಷಕರ ವೃಂದ, ಹಿರಿಯರಾದ ರಾಜು ಶೆಟ್ಟಿ, ಈಶ್ವರ ಆಚಾರ್ಯ, ಮಂಜುನಾಥ್ ಶೆಟ್ಟಿ, ತಂಡದ ಅಧ್ಯಕ್ಷ ಸುಕೇಶ್ ಪೂಜಾರಿ, ಗೌರವಾಧ್ಯಕ್ಷ ರಘುನಾಥ್ ಪೂಜಾರಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಶಿಕಲಾ ಪೂಜಾರಿ, ಮಕ್ಕಳ ಪೋಷಕರು, ಗ್ರಾಮಸ್ಥರು ಮತ್ತು ತಂಡದ ಸರ್ವಸದಸ್ಯರು ಉಪಸ್ಥಿತರಿದ್ದರು.

Insta: glacharyajewellers
Fb: glacharya

- Advertisement -

Related news

error: Content is protected !!