Wednesday, June 17, 2026
spot_imgspot_img
spot_imgspot_img

ಉಡುಪಿ: ಮನೆಯಿಂದ ಹೊರ ಹೋದ ವೃದ್ಧ ವಾಪಸ್ಸು ಬಾರದೇ ನಾಪತ್ತೆ

- Advertisement -
- Advertisement -

ಉಡುಪಿ: ಮನೆಯಿಂದ ಹೊರ ಹೋದ ವೃದ್ಧರೋರ್ವರು ವಾಪಸ್ಸು ಬಾರದೇ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ನಾಪತ್ತೆಯಾದ ವೃದ್ಧನನ್ನು ಕಾಪು ತಾಲೂಕು ಉಚ್ಚಿಲ ಬಡಾ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಉಮರಬ್ಬ (69) ಎಂದು ಗುರುತಿಸಲಾಗಿದೆ.

ಉಮರಬ್ಬ ಎಂಬ ವೃದ್ಧರು ಸೆಪ್ಟೆಂಬರ್ 20 ರಂದು ಮನೆಯಿಂದ ಹೊರಗೆ ಹೋದವರು ಸಂಬಂಧಿಕರ ಮನೆಗೂ ಹೋಗದೇ, ಮನೆಗೂ ಮರಳಿ ಬಾರದೇ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಬ್ಯಾರಿ ಹಾಗೂ ಮಲಯಾಳಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಮೊ.ನಂ: 9480805450, ದೂ.ಸಂಖ್ಯೆ: 0820- 2555452, ಕಾಪು ಪೊಲೀಸ್ ವೃತ್ತ ನಿರೀಕ್ಷಕರು ಮೊ.ನಂ: 9480805431, ದೂ.ಸಂಖ್ಯೆ: 0820-2552133 ಹಾಗೂ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2525444ನ್ನು ಸಂಪರ್ಕಿಸಬಹುದು ಎಂದು ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!