Monday, June 8, 2026
spot_imgspot_img
spot_imgspot_img

ಉಡುಪಿ: ದೋಣಿ ಮಗುಚಿ ಬಿದ್ದು  ಮೀನುಗಾರ ಸಾವು

- Advertisement -
- Advertisement -

ಉಡುಪಿ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದು ಮೀನುಗಾರನೊಬ್ಬ ಸಾವನ್ನಪ್ಪಿದ ಘಟನೆ ಸಾಸ್ತಾನ ಕೋಡಿತಲೆ ಬಳಿ ನಡೆದಿದೆ.

ಮೃತರನ್ನು ಶರತ್ ಎಂದು ಗುರುತಿಸಲಾಗಿದೆ.

ಮೂವರು ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಬಲವಾದ ಅಲೆಗಳಿಂದಾಗಿ ಅವರ ದೋಣಿ ಮಗುಚಿ ಬಿದ್ದಿದೆ. ಮೂವರ ಪೈಕಿ ಇಬ್ಬರು ಮೀನುಗಾರರಾದ ಅಕ್ಷಯ್ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಸುರಕ್ಷಿತವಾಗಿ ಈಜಿ ದಡ ಸೇರಿದ್ದು, ಶರತ್ ಈ ದುರಂತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!