Friday, July 24, 2026
spot_imgspot_img
spot_imgspot_img

ಉಡುಪಿ: ನಕಲಿ ಚಿನ್ನ ನೀಡಿ ವಂಚನೆ; ಆರೋಪಿಯ ಬಂಧನ

- Advertisement -
- Advertisement -

ಉಡುಪಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ಜಯಪ್ರಕಾಸ್.ಡಿ ಎಂದು ಗುರುತಿಸಲಾಗಿದೆ.

ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ ಆರೋಪಿಗಳು ರಾಯಚೂರಿನ ಗೋಪಾಲ ಎಂಬವರಿಗೆ 150 ಗ್ರಾಂ ಚಿನ್ನವೆಂದು ಹೇಳಿ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊತ್ತಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 4,50,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10,00,000 ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

Related news

error: Content is protected !!