Friday, May 17, 2024
spot_imgspot_img
spot_imgspot_img

ಉಡುಪಿ: ಹೋಮ್ ನರ್ಸ್ ಆಗಿ ಕೆಲಸ ಮಾಡುತಿದ್ದ ಮನೆಯಿಂದ ಹಣ ಕದ್ದು ಪರಾರಿ; ಆರೋಪಿ ಅರೆಸ್ಟ್..!

- Advertisement -G L Acharya panikkar
- Advertisement -

ಉಡುಪಿ: ವ್ಯಕ್ತಿಯೋರ್ವ ಹೋಮ್ ನರ್ಸ್ ಆಗಿ ಕೆಲಸ ಮಾಡುತಿದ್ದ ಮನೆಯಿಂದಲೇ ಹಣವನ್ನು ಕದ್ದು ಪರಾರಿಯಾಗಿದ್ದ ಹಣವನ್ನು ಕದ್ದು ಪರಾರಿಯಾಗಿದ್ದ ಯನ್ನು ಉಡುಪಿ ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿ ಆತನಿಂದ 3.13 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ (34) ಎಂದು ಗುರುತಿಸಲಾಗಿದೆ.

ಈ ಕಳ್ಳತನದ ಬಗ್ಗೆ ಪುತ್ತೂರು ಗ್ರಾಮದ ಸಂತೋಷ್ ಎಂಬವರು ಉಡುಪಿ ನಗರ ಠಾಣೆಯಲ್ಲಿ ಡಿ.5ರಂದು ದೂರು ದಾಖಲಿಸಿದ್ದರು. ಮಾತಾ ಸೊಲ್ಯೂಷನ್ ಹೋಮ್ ನರ್ಸ್ ಇವರಿಂದ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ ಎಂಬಾತನನ್ನು ಹೋಂ ನರ್ಸ್ ಆಗಿ ಕೆಲಸಕ್ಕೆ ಇಟ್ಟುಕೊಂಡಿದ್ದು, ಪ್ರವೀಣನು ಕೆಲಸ ಮಾಡುವ ಮನೆಯಿಂದಲೇ ನಾಪತ್ತೆಯಾಗಿದ್ದ. ಹೋಗುವಾಗ ಮನೆಯಿಂದ ಬೊಲೆರೋ ವಾಹನದ ಡ್ಯಾಶ್ ಬೋರ್ಡನಲ್ಲಿದ್ದ 3.13 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ಡಿ.7ರಂದು ಬಾಗಲಕೋಟೆ ತಾಲೂಕು ಹುನಗುಂದದಲ್ಲಿ ಆರೋಪಿ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳನನ್ನು ವಶಕ್ಕೆ ಪಡೆದು 3,13,500 ರೂ. ಹಣವನ್ನು ವಶ ಪಡಿಸಿಕೊಂಡಿದೆ.

- Advertisement -

Related news

error: Content is protected !!