Friday, June 26, 2026
spot_imgspot_img
spot_imgspot_img

ಉಡುಪಿ: ಹೋಂ ಕ್ವಾರಂಟೈನ್‌ನಲ್ಲಿದ್ದ ಬಾಲಕಿ ನೇಣಿಗೆ ಶರಣು!

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕಿರಿಮಂಜೆಶ್ವರ ಕೊಡೇರಿಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಮೃತಪಟ್ಟ ಬಾಲಕಿ ತನ್ವಿತಾ (12). ಬಾಲಕಿಯ ಮನೆಯವರಿಗೆ ಕರೊನಾ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಮನೆಯಲ್ಲಿ ಇದ್ದವರು ಹೋಂ ಕ್ವಾರಂಟೈನ್ ಆಗಿದ್ದು, ಬಾಲಕಿ ಕೂಡ ಕ್ವಾರಂಟೈನ್‌ ಆಗಿದ್ದಳು.

ಕರೊನಾ ಭೀತಿಯಿಂದ ಎಲ್ಲರೊಂದಿಗೆ ಬೆರೆಯಲು, ಚಿಕ್ಕ‌ಮಗುವನ್ನು ಮುಟ್ಟಲು, ಹೊರಗೆ ಹೋಗಲು ಬಾಲಕಿಗೆ ಕುಟುಂಬಸ್ಥರು ನಿರ್ಬಂಧ ವಿಧಿಸಿದ್ದರು. ಮನೆಯೊಳಗೆ ಇರುವಂತೆ ಹೇಳಿದ್ದು, ಇದರಿಂದ ಮನನೊಂದ ತನ್ವಿತಾ ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಂದೂರು ಠಾಣೆಯಲ್ಲಿ ಈ‌ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!