Tuesday, April 20, 2021
spot_imgspot_img
spot_imgspot_img

ಬೆಳ್ತಂಗಡಿ: ಪ್ರೀತಿಸಿದ ಯುವತಿಯ ಮನೆಗೆ ನುಗ್ಗಿ ಚೂರಿ ಇರಿದ ಪಾಗಲ್ ಪ್ರೇಮಿ

ಬೆಳ್ತಂಗಡಿ: ಪ್ರೇಮ ಪ್ರಕರಣದ ವಿಚಾರವಾಗಿ ಯುವಕನೋರ್ವ ಪ್ರೇಯಸಿಯನ್ನು ಮನೆ ಬಿಟ್ಟು ಬರುವಂತೆ ಒತ್ತಾಯಿಸಿದಾಗ ಯುವತಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕುಪಿತಗೊಂಡ ಯುವಕ, ಯುವತಿಯ ಮನೆಗೆ ನುಗ್ಗಿ ಚೂರಿಯಿಂದ ಇರಿದ ಘಟನೆ ಮಂಗಳವಾರ ರಾತ್ರಿ ಲಾೖಲ ಸಮೀಪ ನಡೆದಿದೆ.

driving

ಬೆಳ್ತಂಗಡಿ ತಾಲೂಕು ಲಾೖಲ ಗ್ರಾಮದ ನಿವಾಸಿ ತನ್ನದೇ ಸಮುದಾಯದ 21 ವರ್ಷದ ಯುವತಿ ಇರಿತಕ್ಕೆ ಒಳಗಾದವರು. ಪೂಂಜಾಲಕಟ್ಟೆ ನಿವಾಸಿ ಶಮೀರ್ (22) ಚೂರಿ ಇರಿದ ಯುವಕ.

5 ವರ್ಷದ ಪ್ರೀತಿ!: ಶಮೀರ್, ಯುವತಿಯನ್ನು ಸುಮಾರು 5 ವರ್ಷಗಳಿಂದ ಪ್ರೀತಿ ಸುತ್ತಿದ್ದು, ಮದುವೆಯಾಗಲು ಮನೆ ಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಅದನ್ನು ಆಕೆ ತಿರಸ್ಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಮಂಗಳವಾರ ರಾತ್ರಿ 10.20ಕ್ಕೆ ಯುವತಿ ಮನೆಗೆ ನುಗ್ಗಿ ಆಕೆಗೆ ಚೂರಿಯಿಂದ ಇರಿದಿದ್ದಾನೆ.

ಎಡ ಕೈ, ಬಲ ಕೈಗೆ ಮತ್ತು ಕುತ್ತಿಗೆಗೆ ಗಾಯವಾಗಿದೆ. ತತ್‍ಕ್ಷಣ ಮನೆಮಂದಿ ಆತನನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

MOST POPULAR

HOT NEWS

Related news

error: Content is protected !!