Thursday, March 28, 2024
spot_imgspot_img
spot_imgspot_img

ಕೇಂದ್ರದಿಂದ ರಾಜ್ಯ ಮೀನುಗಾರಿಕಾ ಇಲಾಖೆಗೆ 3500 ಕೋಟಿ ರೂ.ಅನುದಾನ :ಉಡುಪಿ ಸಂಸದೆ ಶೋಭಾ ಕರಂದ್ಲಾಜೆ.

- Advertisement -G L Acharya panikkar
- Advertisement -

ಉಡುಪಿ:ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯಡಿಯಲ್ಲಿ  ನಡೆದ ‘ಪಂಜರ ಮೀನುಕೃಷಿ ಕಾರ್ಯಾಗಾರ‘ ದ ಉದ್ಘಾಟನಾ ಕಾರ್ಯಕ್ರಮವು ನಗರದ ಅಜ್ಜರಕಾಡು ಪುರಭವನದಲ್ಲಿ ನಡೆಯಿತು.

‘ಪಂಜರ ಮೀನುಕೃಷಿ ಕಾರ್ಯಾಗಾರ’ ವನ್ನು ಉದ್ಘಾಟಿಸಿದ ಉಡುಪಿ-ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರಕಾರವು ಮೀನುಗಾರಿಕಾ ಸಚಿವಾಲಯದಿಂದ ಕರ್ನಾಟಕ ರಾಜ್ಯದ ಮೀನುಗಾರಿಕಾ ಇಲಾಖೆಯ ಬೇರೆ ಬೇರೆ ಯೋಜನೆಗಳಲ್ಲಿ 3,500 ಕೋಟಿ ರೂ.ಅನುದಾನ ಬರಲಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕನಸಾದ ಆತ್ಮ ನಿರ್ಭರ ಭಾರತ ಇನ್ನು ಮುಂದೆ ಬರೇ ಕನಸಲ್ಲ, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪಂಜರ ಮೀನು ಕೃಷಿಯಂತಹ ಕ್ರಾಂತಿಕಾರಿ ಯೋಜನೆಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಸರಕಾರ ಹಮ್ಮಿಕೊಂಡಿದೆ ಎನ್ನಲು ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದರು.


ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮೀರಿ, ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮೀನಿನ ಬೇಡಿಕೆಗಳಿಗೆ ಅನುಗುಣವಾಗಿ ವಿಶಿಷ್ಟ ರೀತಿಯಲ್ಲಿ, ದೇಶ-ವಿದೇಶದಲ್ಲಿ ಚಾಲ್ತಿಯಲ್ಲಿರುವ ಪಂಜರ ಮೀನು ಕೃಷಿಯನ್ನು ರಾಜ್ಯದಲ್ಲಿ ಹಮ್ಮಿಕೊಳ್ಳುವ ಮೂಲಕ, 10,000 ಸ್ವಯಂ ಉದ್ಯೋಗಿಗಳನ್ನು ಸೃಷ್ಟಿಸಿ ಯುವ ದೊಡ್ಡ ಯೋಜನೆಯನ್ನು ಮೀನುಗಾರಿಕಾ ಇಲಾಖೆ ಹಮ್ಮಿಕೊಂಡಿದೆ ಎಂದು ಹೇಳಿದರು.

ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

- Advertisement -

Related news

error: Content is protected !!