Sunday, May 19, 2024
spot_imgspot_img
spot_imgspot_img

ಉಡುಪಿ: ಬಿಸಿಲ ಬೇಗೆಗೆ ತಂಪೆರೆದ ಮಳೆರಾಯ ! – ಅಕಾಲಿಕ ಮಳೆಗೆ ಜನ ಹೈರಾಣು

- Advertisement -G L Acharya panikkar
- Advertisement -

ಉಡುಪಿ: ರಾಜ್ಯದಲ್ಲಿ ಎರಡು ದಿನಗಳಿಂದ ಅಲ್ಲಲ್ಲಿ ಮಳೆಯಾದರೂ ಕರಾವಳಿ ಜಿಲ್ಲೆ ಉಡುಪಿ ಅಕಾಲಿಕ ಮಳೆಯಿಂದ ವಿನಾಯಿತಿ ಪಡೆದಿತ್ತು. ಭಾನುವಾರ ಮಾತ್ರ ಭಾರೀ ಮಳೆ ಸುರಿದು ವಾತಾವರಣದ ಚಿತ್ರಣವೇ ಬದಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದರ ಪರಿಣಾಮ ಕರಾವಳಿ ಕಡಲ ತೀರ ಉಡುಪಿ ಜಿಲ್ಲೆ ಮೇಲೂ ಬಿದ್ದಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ತಾಲೂಕುಗಳಲ್ಲಿ ಭಾರೀ ಮಳೆ ಬಿದ್ದಿದೆ. ಮಧ್ಯಾಹ್ನದವರೆಗೆ ಕಾರ್ಕಳ ಹೆಬ್ರಿಯಲ್ಲಿ ಭಾರೀ ಬಿಸಿಲಿತ್ತು. ಎರಡು ಗಂಟೆ ಕಳೆಯುತ್ತಿದ್ದಂತೆ ವಾತಾವರಣದ ಚಿತ್ರಣ ದಿಢೀರ್ ಬದಲಾಯಿತು.

ಮೋಡ ಕವಿದು ಮಳೆ ಆರಂಭವಾಯಿತು. ಉಡುಪಿ, ಕುಂದಾಪುರ ನಗರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ನಗರ ಪ್ರದೇಶದಲ್ಲಿ ರೈನ್ ಕೋಟ್ ತಾರದ ದ್ವಿಚಕ್ರ ವಾಹನ ಸವಾರರು ಪರದಾಡಿದರು. ಉಡುಪಿ ಜಿಲ್ಲೆಯಾದ್ಯಂತ ನೂರಾರು ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮ ಇಂದು ನಿಗದಿಯಾಗಿತ್ತು. ದಿಢೀರ್ ಮಳೆ ಅಲ್ಲೆಲ್ಲ ಜನರಿಗೆ ಸಮಸ್ಯೆ ತಂದಿಟ್ಟಿತು. ಒಂದೆರಡು ಗಂಟೆ ಮಳೆ ಬಿದ್ದ ಕೂಡಲೇ ಉಡುಪಿಯಲ್ಲಿ ವಾತಾವರಣ ಸಂಪೂರ್ಣ ತಂಪಾಗಿದೆ.

ಮಳೆ ಮುಂದುವರಿಯುವ ಸಾಧ್ಯತೆ ಇದೆ. ಅಡಿಕೆ, ಗೇರು ಮಾವಿನ ಬೆಳೆ ಮೇಲೆ ಅಡ್ಡ ಪರಿಣಾಮ ಬೀಳಲಿದೆ. ತರಕಾರಿ, ಆಹಾರದ ಬೆಳೆ ಈ ಭಾಗದಲ್ಲಿ ಕಡಿಮೆ ಬೆಳೆಯುವ ಕಾರಣ ದೊಡ್ಡ ಪ್ರಮಾಣದ ನಷ್ಟ ಆಗಲಿಕ್ಕಿಲ್ಲ. ಮುಂಜಾನೆ ಚಳಿ, ಮಧ್ಯಾಹ್ನ ಬಿಸಿಲು, ಸಂಜೆ ಮಳೆ ಹೀಗೆ ಒಂದೇ ದಿನ ಮೂರು ತರದ ವಾತಾವರಣ ಉಡುಪಿಯಲ್ಲಿ ಕಾಣಿಸಿಕೊಂಡಿತು.

- Advertisement -

Related news

error: Content is protected !!