Saturday, August 1, 2026
spot_imgspot_img
spot_imgspot_img

ಪುತ್ತೂರು ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ವಿಧಿವಶ

- Advertisement -
- Advertisement -

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞರಾದ ಶಿರ್ವ ಮಂಚಿಕಲ್ಲು ನಿವಾಸಿ ಡಾ.ಸಂದೀಪ್ ರವರು ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನಲ್ಲಿ ಆ.27 ರಂದು ರಾತ್ರಿ ನಿಧನರಾದರು.

ಇವರು ಸೌತ್ ಕೆನರಾದಲ್ಲಿಯೇ ಅತೀ ಹೆಚ್ಚು ಹೆರಿಗೆ ಮಾಡಿಸಿರುವ ಖ್ಯಾತ ಹೆರಿಗೆ ತಜ್ಞರಾಗಿದ್ದಾರೆ. ಸಿಜೇರಿಯನ್ ಎಕ್ಸ್ಪರ್ಟ್ ಕೂಡ ಆಗಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದ ಇವರು ಪುನಃ ಪುತ್ತೂರಿಗೆ ವರ್ಗಾವಣೆಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರು.

ಇವರ ಅವಳಿ ಸಹೋದರ ಮಹಾವೀರ ಆಸ್ಪತ್ರೆಯ ಖ್ಯಾತ ಎಲುಬು ತಜ್ಞ ಪ್ರದೀಪ್ ಬೋರ್ಕರ್. ಮೃತರು ಹೆಂಡತಿ, ಮಗ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

driving
- Advertisement -

Related news

error: Content is protected !!