Thursday, July 23, 2026
spot_imgspot_img
spot_imgspot_img

ಉಡುಪಿ : ರಸ್ತೆ ಅಪಘಾತ: ಸ್ಕೂಟರ್ ಸವಾರ ಮೃತ್ಯು!

- Advertisement -
- Advertisement -

ಕಾಪು : ಬಸ್ಸೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರೊಬ್ಬರು ಮೃತಪಟ್ಟ ಘಟನೆ ಪಾಂಗಾಳ ರಾ.ಹೆ 66ರಲ್ಲಿ ಸೋಮವಾರ ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಮಲ್ಪೆ ಪಡುಕೆರೆ ಮೂಲದ ಕಾಪು ಮೂಳೂರು ನಿವಾಸಿ ಕೃಷ್ಣರಾಜ ಎಸ್.ಕರ್ಕೇರ(50) ಎಂದು ಗುರುತಿಸಲಾಗಿದೆ.

ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್, ಎದುರಿನಲ್ಲಿ ಹೋಗುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ.
ಇದರಿಂದ ರಸ್ತೆಗೆ ಬಿದ್ದು ಗಾಯಗೊಂಡ ಸವಾರ ಕೃಷ್ಣರಾಜ ಕರ್ಕೇರ ಅವರನ್ನು ತಕ್ಷಣ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಕೃಷ್ಣರಾಜ ಕರ್ಕೇರ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಸ್ಥಳಕ್ಕೆ ಕಾಪು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!