Monday, May 6, 2024
spot_imgspot_img
spot_imgspot_img

ಉಡುಪಿ: ದೇವಸ್ಥಾನದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ !

- Advertisement -G L Acharya panikkar
- Advertisement -

ಉಡುಪಿ: ತೆಕ್ಕಟೆ ಮಹಾಲಿಂಗೇಶ್ವರ ದೇವಸ್ಥಾನದ ಒಳಗೆ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಆತ್ನಹತ್ಯೆಗೆ ಶರಣಾದ ಯುವಕನನ್ನು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35) ಎಂದು ಗುರುತಿಸಲಾಗಿದೆ. ಈತ ಸೆಂಟ್ರಿಂಗ್ ಕೆಲಸಗಳಿಗೆ ಹೋಗುತ್ತಿದ್ದ. ಚಂದ್ರ ಪೂಜಾರಿ ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ. ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಈತ ಇಲ್ಲಿನ ಕೆಲಸ ಕಾರ್ಯಗಳಿಗೆ ನೆರವಾಗುತ್ತಿದ್ದ.

ಬಾವಿ ಹಗ್ಗ ಬಳಸಿ ಆತ್ಮಹತ್ಯೆ: ಚಂದ್ರ ಪೂಜಾರಿ ಇತ್ತೀಚಿನ ದಿನಗಳಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ದೇವಸ್ಥಾನದ ಬಾವಿಯ ಹಗ್ಗವನ್ನು ಉಪಯೋಗಿಸಿ ಚಂದ್ರ ಪೂಜಾರಿ ಆತ್ಮಹತ್ಯೆಗೆ ಶರಣಾಗಿದ್ದು. ಇಂದು ಬೆಳಗ್ಗೆ ದೇವಸ್ಥಾನದ ಕಸ ಗುಡಿಸುವ ಕೆಲಸಗಾರರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

- Advertisement -

Related news

error: Content is protected !!