Saturday, June 28, 2025
spot_imgspot_img
spot_imgspot_img

ಉಡುಪಿ: ಭಾರೀ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಮರ; ಎರಡು ರಿಕ್ಷಾಗಳಿಗೆ ಹಾನಿ..!

- Advertisement -
- Advertisement -

ಉಡುಪಿ: ನಸುಕಿನ ವೇಳೆ ಬೀಸಿದ ಸುಂಟರಗಾಳಿಗೆ ತೆಂಗಿನಮರ ಬಿದ್ದು ಮನೆ ಹಾಗೂ ಎರಡು ರಿಕ್ಷಾಗಳಿಗೆ ಹಾನಿ ಉಂಟಾಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ಉಡುಪಿ ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ನಡೆದಿದೆ.

ಭಾರೀ ಗಾಳಿ ಮಳೆಗೆ ಬಜೆಯ ಅಮ್ಮಣ್ಣಿ ಸೇರಿಗಾರ್ತಿ ಎಂಬವರ ಮನೆ ಸಮೀಪದ ತೆಂಗಿನಮರ ಬಿದ್ದು ಮನೆ ಹಾನಿಯಾಗಿದ್ದು, ಮನೆ ಬಳಿ ನಿಲ್ಲಿಸಿದ್ದ ಅಮ್ಮಣಿಯವರ ಮಕ್ಕಳಾದ ಗಣಪತಿ ಸೇರಿಗಾರ ಹಾಗೂ ರವಿ ಸೇರಿಗಾರ ಎಂಬವರ ಆಟೋ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿವೆ ಎಂದು ತಿಳಿದು ಬಂದಿದೆ. ಇದರಿಂದ ಲಕ್ಷಾಂತರ ನಷ್ಟ ರೂ. ಉಂಟಾಗಿದೆ.

- Advertisement -

Related news

error: Content is protected !!