Sunday, June 21, 2026
spot_imgspot_img
spot_imgspot_img

ಇಲಿ ಪಾಶಾಣ ಮಿಶ್ರಿತ ಪಪ್ಪಾಯಿ ತಿಂದು ಮಹಿಳೆ ಸಾವು

- Advertisement -
- Advertisement -

ಉಡುಪಿ(ಅ.26): ಇಲಿಗಳನ್ನು ಕೊಲ್ಲಲೆಂದು ವಿಷ ಬೆರೆಸಿ ಇಟ್ಟಿದ್ದ ಪಪ್ಪಾಯಿಯನ್ನು ಅರಿಯದೆ ತಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕುದಿ ಗ್ರಾಮದ ದೇವರಗುಂಡ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ದೇವರಗುಂಡ ನಿವಾಸಿ ವಾಮನ ನಾಯ್ಕ ಎಂಬವರ ಪತ್ನಿ ಶ್ರೀಮತಿ(43) ಈ ರೀತಿ ಮೃತವಟ್ಟವರು ಆಗಿದ್ದಾರೆ. ಘಟನೆಯ ಬಗ್ಗೆ ಮೃತರ ಪುತ್ರಿ ವಿದ್ಯಾಶ್ರೀ ನೀಡಿರುವ ದೂರಿನಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಪರೀತ ಇಲಿಗಳ ಕಾಟ ಇರುವುದರಿಂದ ಅವುಗಳನ್ನು ಕೊಲ್ಲಲೆಂದು ಮನೆಯಲ್ಲಿ ಪಪ್ಪಾಯಿ ಹಣ್ಣಿನಲ್ಲಿ ವಿಷ ಬೆರೆಸಿ ಇಡಲಾಗಿತ್ತು. ಇದರ ಅರಿವಿಲ್ಲದೆ ತನ್ನ ತಾಯಿ ಈ ಪಪ್ಪಾಯಿ ಹಣ್ಣಿನ ತುಂಡುಗಳನ್ನು ತಿಂದಿದ್ದಾರೆ. ಇದರಿಂದ ಮರುದಿನ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮತಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!