


ಹೈದರಾಬಾದ್: ತಮ್ಮ ನಾಯಿಯನ್ನು ತಮ್ಮೊಂದಿಗೆ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಭಾರತೀಯ ದಂಪತಿ 15 ಲಕ್ಷ ಖರ್ಚು ಮಾಡಿದ್ದಾರೆ ಅಂದ್ರೆ ನೀವು ನಂಬಲೇಬೇಕು. ದಂಪತಿ ಹೈದರಾಬಾದ್‌ನಿಂದ ಆಸ್ಟ್ರೇಲಿಯಾಕ್ಕೆ ಹೋಗಿ ಸೆಟಲ್ ಆಗಲು ನಿರ್ಧರಿಸಿದ್ದರು. ಆದರೆ, ಅವರು ತಮ್ಮ ಸಾಕು ನಾಯಿ ಸೈಯನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಾಗಿಲ್ಲ. ಅದನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗುವುದು ತುಂಬಾ ದುಬಾರಿಯಾಗಿದ್ದರೂ ಬಿಟ್ಟು ಹೋಗಲು ಅವರು ಸಿದ್ಧರಿರಲಿಲ್ಲ.
ತಮ್ಮ ಪ್ರೀತಿಯ ಸಾಕುಪ್ರಾಣಿ ತಮ್ಮೊಂದಿಗೆ ಪ್ರಯಾಣಿಸಲು ಮತ್ತು ಆಸ್ಟ್ರೇಲಿಯಾದಲ್ಲಿ ಹೊಸ ಜೀವನವನ್ನು ಪ್ರಾರಂಭಿಸಲು ಅವರು ಸುಮಾರು 15 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ.ಆಸ್ಟ್ರೇಲಿಯಕ್ಕೆ ಬರುವ ವಿದೇಶದ ನಾಯಿಗಳು ರೇಬಿಸ್ ಮುಕ್ತ ದೇಶದಲ್ಲಿ 6 ತಿಂಗಳು ತಂಗಬೇಕೆಂಬ ನಿಯಮವಿದ್ದು, ಅದರಂತೆ ನಾಯಿಯೊಂದಿಗೆ ಭಾರತದಿಂದ ದಂಪತಿ ದುಬೈಗೆ ಹೋಗಿದ್ದಾರೆ. ಅಲ್ಲಿ 6 ತಿಂಗಳು ನಾಯಿಯನ್ನು ಇರಿಸಿದ್ದು, 15 ಲಕ್ಷ ರೂಪಾಯಿ ವ್ಯಯಿಸಿದ್ದಾರೆ. ಅಂದಹಾಗೆ, ನಾಯಿ ಸೈ ಯ ಪ್ರಯಾಣದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.








