Thursday, April 18, 2024
spot_imgspot_img
spot_imgspot_img

ಉಜಿರೆ: ದುಬಾರಿ ಬೆಲೆಗೆ ತರಕಾರಿ ಮಾರಾಟ; ಅಂಗಡಿಗಳ ವಿರುದ್ಧ ಸಿಡಿದೆದ್ದ ನಾಗರಿಕರು

- Advertisement -G L Acharya panikkar
- Advertisement -

ಉಜಿರೆ: ಲಾಕ್ ಡೌನ್ ವೇಳೆಯಲ್ಲಿ ಪರಿಸ್ಥಿತಿಯ ಲಾಭ ಪಡೆದು ದುಪ್ಪಟ್ಟು ದರಗಳಲ್ಲಿ ವ್ಯಾಪಾರಿಗಳು ತಮ್ಮ ಸೊತ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಜಿರೆಯ ನಾಗರಿಕರು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದಾರೆ.

ಈಗ ಇಡೀ ದೇಶವೆ ಆರ್ಥಿಕ ದುಸ್ಥಿತಿಗೆ ಬಿದ್ದಿದ್ದು, ಲಾಕ್ಡೌನ್ ಸಮಯದಲ್ಲಿ ಜನರು ಕೆಲಸ ಕಾರ್ಯವಿಲ್ಲದೇ ದುಡಿಮೆ ಇಲ್ಲದ ಈ ಸಮಯದಲ್ಲಿ ಉಜಿರೆ ಗ್ರಾಮದ ಕೆಲವು ತರಕಾರಿ ವ್ಯಾಪಾರಸ್ಥರು ದುಬಾರಿ ಬೆಲೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಅವರಿಂದ ಜನಸಾಮಾನ್ಯರನ್ನು ದೋಚುವ ಕೆಲಸ ಆಗುತ್ತಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಪೇಟೆಯ ತರಕಾರಿ ಅಂಗಡಿಗಳಲ್ಲಿ ಬೆಲೆ ದುಬಾರಿಯಾಗಿರುತ್ತದೆ. ಈ ಬಗ್ಗೆ ಜನರು ತಮ್ಮ ದುಸ್ಥಿತಿಯನ್ನು ವ್ಯಕ್ತಪಡಿಸಿದ್ದು, ಎಲ್ಲರೂ ಕೂಡ ನಿಗದಿತ ಬೆಲೆಗೆ ಮಾರಾಟ ಮಾಡುವಂತಾಗಲಿ ಎಂದು ಅವರು ಸ್ಥಳೀಯ ಆಡಳಿತವನ್ನು ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದೆ ರಸ್ತೆ ಬದಿ ತಳ್ಳು ಗಾಡಿಯಲ್ಲಿ ಅಗ್ಗದ ಬೆಲೆಯಲ್ಲಿ ಮಾರುತ್ತಾ ಇದ್ದರು. ಅದರಿಂದ ಗ್ರಾಹಕರಿಗೆ ಉಪಯೋಗವಾಗುತ್ತಿತ್ತು, ಅಲ್ಲದೆ ರಸ್ತೆ ಬದಿ ವ್ಯಾಪಾರಸ್ಥರು ತಮ್ಮ ಜೀವನೋಪಾಯ ಕಂಡುಕೊಂಡಿದ್ದರು. ಇದೀಗ ಯಾವುದೋ ಲಾಬಿ ಕೆಲಸ ಮಾಡಿ ರಸ್ತೆಬದಿ ವ್ಯಾಪಾರಸ್ಥರನ್ನು ಚದುರಿಸಿದ್ದಾರೆ ಎನ್ನಲಾಗಿದೆ.

ಈಗ ತರಕಾರಿಗಳನ್ನು ದುಬಾರಿ ಬೆಲೆಗೆ ಮಾರುವುದನ್ನು ವಿರೋಧಿಸಿ ಇಂದು ಗ್ರಾಮ ಪಂಚಾಯತಿಗೆ ಅರ್ಜಿ ನೀಡಲಾಗಿದೆ.

- Advertisement -

Related news

error: Content is protected !!