Wednesday, May 1, 2024
spot_imgspot_img
spot_imgspot_img

ಬೆಳ್ತಂಗಡಿ: ಹರೀಶ್ ಪೂಂಜಾರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ ಅಮಾನತು

- Advertisement -G L Acharya panikkar
- Advertisement -

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಜಿರೆಯ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಿಡಿಓ ಆದೇಶ ಹೊರಡಿಸಿದ್ದಾರೆ. ನಾಗೇಶ್ ಅಮಾನತಾದ ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ.

ಪೂಂಜಾ ಅವರ ಚುನಾವಣಾ ಪ್ರಚಾರ ಹಾಗೂ ವಿಜಯೋತ್ಸವದಲ್ಲಿ ಪಂಚಾಯಿತಿ​​ ಸಿಬ್ಬಂದಿ ನಾಗೇಶ್ ಬಿಜೆಪಿ ಬಾವುಟ ಹಿಡಿದು ತಿರುಗುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆ ಸೇವೆಯಿಂದ ಅಮಾನತು ಮಾಡಿ ಪಿಡಿಓ ಪ್ರಕಾಶ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿರುವವರು ಯಾವುದೇ ರಾಜಕೀಯ ಪಕ್ಷದ ಪರವಾಗಿ ತೊಡಗಿಸಿಕೊಳ್ಳಬಾರದು ಎಂದು ನಿಯಮವಿದ್ದರೂ ಅದನ್ನು‌ ಮೀರಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮತ್ತು ವಿಜಯೋತ್ಸವದಲ್ಲಿ ಭಾಗಿಯಾಗಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

Related news

error: Content is protected !!