Thursday, July 23, 2026
spot_imgspot_img
spot_imgspot_img

ಉಳ್ಳಾಲ: ಕುತ್ತಾರಿನಲ್ಲಿ ಸರಣಿ ಅಪಘಾತ: ವೈದ್ಯ ವಿದ್ಯಾರ್ಥಿನಿಯರಿದ್ದ ಕಾರು ಜಖಂ, ಓರ್ವನಿಗೆ ಗಾಯ

- Advertisement -
- Advertisement -

ಉಳ್ಳಾಲ: ಕುತ್ತಾರು ಮದನಿ ನಗರ ಸಮೀಪ ಶುಕ್ರವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದ್ದು, ಓರ್ವ ಗಾಯಗೊಂಡಿರುವುದು ವರದಿಯಾಗಿದೆ. ಕಾರೊಂದು ದೇರಳಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಎದುರಿನಿಂದ ವೇಗವಾಗಿ ಬರುತ್ತಿದ್ದ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಬಳಿಕ ವೈದ್ಯ ವಿದ್ಯಾರ್ಥಿಗಳಿದ್ದ ಇನ್ನೊಂದು ಕಾರಿಗೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಇದರಿಂದ ರಿಕ್ಷಾ ಚಾಲಕ ದೇರಳಕಟ್ಟೆ ಬದ್ಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ (35) ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಬಂಟ್ವಾಳ: ಪೈಪ್‌ಲೈನ್‌ಗೆ ಕನ್ನ ಕೊರೆದು ಡೀಸೆಲ್ ಕಳವು; ಕೃಷಿ ಜಮೀನಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿತ್ತು ಡಿಸೇಲ್ ಕಳ್ಳತನ..!

ವೈದ್ಯ ವಿದ್ಯಾರ್ಥಿನಿಯರಿದ್ದ ಕಾರು ಕೂಡಾ ಜಖಂಗೊಂಡಿದ್ದರೂ ವಿದ್ಯಾರ್ಥಿನಿಯರು ಅಪಾಯಗಳಿಲ್ಲದೆ ಪಾರಾಗಿದ್ದಾರೆ. ರಿಕ್ಷಾ ನಜ್ಜುಗುಜ್ಜಾಗಿದೆ. ಈ ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಕಾರನ್ನು ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರನ್ನು ನಾಗುರಿ ಸಂಚಾರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!