Saturday, June 6, 2026
spot_imgspot_img
spot_imgspot_img

ಉಳ್ಳಾಲ: ಗಣಿ ಅಧಿಕಾರಿ ಕೃಷ್ಣವೇಣಿಯಿಂದ ಮಾಧ್ಯಮಗಳಿಗೆ ಸುಳ್ಳು ಮಾಹಿತಿ- ಸಾಮಾಜಿಕ ಕಾರ್ಯಕರ್ತ ಅಬೂಬಕ್ಕರ್‌ ಸಜಿಪ ಸ್ಪಷ್ಟನೆ

- Advertisement -
- Advertisement -

ಉಳ್ಳಾಲ: ಅಮಾನತಿನಲ್ಲಿರುವ ದ.ಕ. ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಕೃಷ್ಣವೇಣಿ ಮಾಧ್ಯಮಗಳಿಗೆ ಸುಳ್ಳು ಸುದ್ದಿ ನೀಡಿ ನ್ಯಾಯಲಯದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬೂಬಕ್ಕರ್ ಸಜಿಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 16ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡು ಮಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾದ ಪ್ರಕರಣ ರದ್ದುಪಡಿಸುವಂತೆ ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಮುಂದಿನ ವಿಚಾರಣೆ ದಿನಾಂಕದವರೆಗೆ ಮುಂದಿನ ಎಲ್ಲ ಪ್ರಕ್ರಿಯೆ ತಡೆಹಿಡಿದು ಜೂನ್ 13ರಂದು ಆದೇಶ ನೀಡಿದ್ದು, ಆಗಸ್ಟ್ 12ರವರೆಗೆ ಉಚ್ಚ ನ್ಯಾಯಾಲಯದಲ್ಲಿ ಯಾವುದೇ ವಿಚಾರಣೆಯೂ ನಡೆದಿಲ್ಲ. ಕೃಷ್ಣವೇಣಿ ಅವರ ಅಮಾನತು ಆದೇಶಕ್ಕೂ ಉಚ್ಚನ್ಯಾಯಾಲಯ ಯಾವುದೇ ತಡೆ ನೀಡಿರುವುದಿಲ್ಲ. ಆದರೂ ಕೃಷ್ಣವೇಣಿ, ಉಚ್ಚನ್ಯಾಯಾಲಯ ಜೂನ್ 13ರ ಆದೇಶ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿ ಉಚ್ಚನ್ಯಾಯಾಲಯ ಅಮಾನತು ಆದೇಶ ರದ್ದುಪಡಿಸಿದೆ ಎಂದು ಸುಳ್ಳು ಮಾಹಿತಿ ನೀಡಿದ್ದರಿಂದ ಆ.3 ಹಾಗೂ 4ರಂದು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ‘ಗಣಿ ಅಧಿಕಾರಿ ಕೃಷ್ಣವೇಣಿ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆ’ ಎಂಬ ತಲೆಬರಹದಲ್ಲಿ ಸುದ್ದಿ ಪ್ರಕಟವಾಗಿದೆ ಎಂದು ಆರೋಪಿಸಿದ್ದಾರೆ.

ದೂರುದಾರ ಗಣೇಶ್ ಶೆಟ್ಟಿ ಹಾಗೂ ಕನ್ಯಾನ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಸುದ್ದಿಗೋಷ್ಠಿಯಲ್ಲಿದ್ದರು.

- Advertisement -

Related news

error: Content is protected !!