Saturday, June 28, 2025
spot_imgspot_img
spot_imgspot_img

ಉಳ್ಳಾಲ: ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಹಾಗೂ ಮಗು ಮೃತ್ಯು..!

- Advertisement -
- Advertisement -

ಉಳ್ಳಾಲ: ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಹಾಗೂ ಮಗು ಮೃತಪಟ್ಟ ಘಟನೆ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತುವಿನಲ್ಲಿ ನಡೆದಿದೆ.

ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತುವಿನ ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಗುಡ್ಡ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಐವರು ಮಣ್ಣಿನಡಿ ಸಿಲುಕಿಕೊಂಡಿದ್ದರು. ದುರ್ಘಟನೆಯಲ್ಲಿ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ ಪೂಜಾರಿ ಮತ್ತು ಮೊಮ್ಮಗ 3 ವರ್ಷ ಪ್ರಾಯದ ಆರ್ಯನ್ ಜೀವ ಕಳೆದುಕೊಂಡಿದ್ದಾರೆ.

ಈಗಾಗಲೇ 2 ವರ್ಷದ ಮಗ ಆರುಷ್ ನನ್ನು ರಕ್ಷಿಸಲಾಗಿದೆ. ಕಾಂತಪ್ಪ ಪೂಜಾರಿ ಅವರ ಪುತ್ರ ಸೀತಾರಾಮ ಅವರ ಪತ್ನಿ ಆಶ್ವಿನಿ ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ NDRF, SDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಾರೀ ಮಳೆಯ ನಡುವೆಯೂ ರಕ್ಷಣಾ ಕಾರ್ಯ ನಡೆಯುತ್ತಿದೆ.

- Advertisement -

Related news

error: Content is protected !!