Friday, May 3, 2024
spot_imgspot_img
spot_imgspot_img

ಉಳ್ಳಾಲ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು..!

- Advertisement -G L Acharya panikkar
- Advertisement -

ಉಳ್ಳಾಲ: ಐಸ್ ಕ್ರೀಮ್ ಪಾರ್ಲರ್ ಒಂದರ ವೈಟರ್ ಆಗಿದ್ದ ಯುವಕನೋರ್ವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ ಕೊಡಗು ಜಿಲ್ಲೆ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಎಂದು ಗುರುತಿಸಲಾಗಿದೆ.

ಗೋಡೌನ್ ನ ಅಂಗಳದಲ್ಲಿ ಸ್ಥಳೀಯ ಯುವಕರು ಬೆಳಿಗ್ಗೆ ಶಟಲ್ ಆಡುತ್ತಿದ್ದಾಗ ಕಿಟಕಿ ತೆರೆದು ಯೋಗೇಶ್ ನೋಡಿದ್ದರು. ಯುವಕರು ತೆರಳಿದ ಬಳಿಕ ಯೋಗೇಶ್ ಡೆತ್ ನೋಟ್ ಬರೆದು ಕೃತ್ಯ ಎಸಗಿದ್ದಾರೆ. ಕಳೆದ ಏಳು ವರುಷದಿಂದ ತೊಕ್ಕೊಟ್ಟುವಿನ ರಾಯನ್ಸ್ ಕ್ರೀಮ್ ಪಾರ್ಲರಲ್ಲಿ ಕೆಲಸಕ್ಕಿದ್ದ ಅವಿವಾಹಿತ ಯೋಗೇಶ್ ಎಲ್ಲರಿಗೂ ಪರಿಚಿತನಾಗಿದ್ದ.ಪಿಲಾರಿನ ಗೋಡೌನಲ್ಲೇ ಯೋಗೇಶ್ ಸ್ನೇಹಿತರೊಂದಿಗೆ ವಾಸವಿದ್ದ. ಐಸ್ ಕ್ರೀಮ್ ಪಾರ್ಲರ್ ಒಂದರ ವೈಟರ್ ಆಗಿದ್ದ ಇವರು ಪಿಲಾರ್ ನ ಗೋಡೌನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

- Advertisement -

Related news

error: Content is protected !!