Saturday, May 4, 2024
spot_imgspot_img
spot_imgspot_img

ತಲಪಾಡಿ: ಬೈಕ್ ಡಿಕ್ಕಿ; ಪಾದಚಾರಿ ಮೃತ್ಯು..!

- Advertisement -G L Acharya panikkar
- Advertisement -

ತಲಪಾಡಿ: ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ತಲಪಾಡಿ ಹಳೆಯ ಬಸ್ಸು ತಂಗುದಾಣ ಬಳಿಯ ನಿವಾಸಿ ರಾಜೇಶ್ ಶೆಟ್ಟಿ(49) ಎಂದು ಗುರುತಿಸಲಾಗಿದೆ.

ರಾಜೇಶ್ ಅವರಿಗೆ ತಲಪಾಡಿ ಹಳೆ ಬಸ್ಸು ತಂಗುದಾಣದ ಬಳಿ ಬೇಕರಿ ಇದ್ದು, ಎದುರಿನ ಹೆದ್ದಾರಿ ಬದಿಯಲ್ಲೇ ಮನೆಯಿದೆ. ಭಾನುವಾರದಂದು ತಲಪಾಡಿ ದೇವಿಪುರದ ರಥೋತ್ಸವ ಇದ್ದ ಹಿನ್ನಲೆ ರಾಜೇಶ್ ಅವರು ಮನೆಗೆ ಬಂದಿದ್ದ ನೆಂಟರನ್ನು ಉಪಚರಿಸಿ ಮದ್ಯಾಹ್ನ ವೇಳೆ ಬೇಕರಿಗೆ ತೆರಳಲು ಹೆದ್ದಾರಿ ದಾಟಲು ನಿಂತಿದ್ದ ವೇಳೆ ರಸ್ತೆಯ ವಿರುದ್ಧ ಡಿಕ್ಕಿನಲ್ಲಿ ಧಾವಿಸಿದ್ದ ಬೈಕ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ರಾಜೇಶ್ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಮೃತ ರಾಜೇಶ್ ತಲಪಾಡಿ ವೀರಾಂಜನೇಯ ವ್ಯಾಯಾಮ ಶಾಲೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು,ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು.ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಘಟನೆಗೆ ಕಾರಣನಾದ ಬೈಕ್ ಸವಾರ ಮಹಮ್ಮದ್ ಸೊಹೈಲ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!