Friday, May 17, 2024
spot_imgspot_img
spot_imgspot_img

ಉಳ್ಳಾಲ: ಮೀಟರ್ ರೀಡರ್ ಎಡವಟ್ಟು..! ಬರೋಬ್ಬರಿ 7 ಲಕ್ಷ ರೂ. ವಿದ್ಯುತ್ ಬಿಲ್ ಕಂಡು ಮನೆ ಮಾಲೀಕ ಶಾಕ್

- Advertisement -G L Acharya panikkar
- Advertisement -

ಉಳ್ಳಾಲ: ಮಾಲೀಕನೋರ್ವನಿಗೆ ಬರೋಬ್ಬರಿ 7 ಲಕ್ಷ ರೂಪಾಯಿ ಕರೆಂಟ್​ ಬಿಲ್​ ಬಂದಿರುವ ಘಟನೆ ನಡೆದಿದೆ. ಮಂಗಳೂರಿನ ಉಳ್ಳಾಲ ಮೂಲದ ವ್ಯಕ್ತಿಗೆ ಬರೋಬ್ಬರಿ 7 ಲಕ್ಷ ವಿದ್ಯುತ್ ಬಿಲ್ ಬಂದಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಕರೆಂಟ್ ಬಿಲ್ ಕಂಡು ಮನೆ ಮಾಲೀಕ ಉಳ್ಳಾಲಬೈಲಿನ ನಿವಾಸಿ ಸದಾಶಿವ ಆಚಾರ್ಯ ಅಚ್ಚರಿಗೊಂಡಿದ್ದಾರೆ.

ಮನೆ ಮಾಲೀಕ ಸದಾಶಿವ ಆಚಾರ್ಯ ಬಿಲ್ ರೀಡರ್ ಎಡವಟ್ಟಿ‌ನಿಂದ ಮನೆಯ ವಿದ್ಯುತ್​ ಬಿಲ್​ 7,71,072 ರೂಪಾಯಿ ಬಂದಿದೆ ಎಂದು ಹೇಳಿದ್ದಾರೆ. ರೀಡರ್​ 99,338 ಯೂನಿಟ್ ಖರ್ಚಾಗಿದೆ ಎಂದು ಬಿಲ್​ ನಮೂದಿಸಿದ್ದಾನೆ ಎಂದು ಮನೆ ಮಾಲೀಕ ತಿಳಿಸಿದ್ದಾರೆ.

ಇನ್ನು ಸದಾಶಿವ ಆಚಾರ್ಯ ಅವರಿಗೆ ಪ್ರತಿ ತಿಂಗಳು ಮೂರು ಸಾವಿರದಷ್ಟು ಬಿಲ್ ಬರುತ್ತಿದ್ದು, ಆದರೆ ಒಂದೇ ಬಾರಿ 7 ಲಕ್ಷ ರೂಪಾಯಿ ಬಿಲ್​ ಬಂದಿದ್ದನ್ನು ಕಂಡು ಶಾಕ್ ಆಗಿದ್ದಾನೆ. ಕೊನೆಗೆ ಮೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ.

ಉಳ್ಳಾಲ ಉಪವಿಭಾಗ ಮೆಸ್ಕಾಂ ಕಛೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಸದಾಶಿವ ಆಚಾರ್ಯ ಅವರ ಮನೆ ಬಾಗಿಲಿಗೆ ಪರಿಷ್ಕೃತ ಬಿಲ್ ಬಂದಿದೆ. ಮಧ್ಯಾಹ್ನದ ವೇಳೆ ಪರಿಷ್ಕೃತ 2833 ರೂಪಾಯಿಗಳ ವಿಲ್ ಮನೆ ತಲುಪಿದೆ.

- Advertisement -

Related news

error: Content is protected !!