Saturday, April 27, 2024
spot_imgspot_img
spot_imgspot_img

ಉಳ್ಳಾಲ: ಮಹಿಳೆಯ ಸ್ನಾನದ ವೀಡಿಯೋ ಪ್ರಕರಣದಲ್ಲಿ ಬಿಡುಗಡೆಗೊಂಡಿದ್ದಾತ ಕಳವು ಪ್ರಕರಣದಲ್ಲಿ ಅಂದರ್

- Advertisement -G L Acharya panikkar
- Advertisement -

ಉಳ್ಳಾಲ: ಫ್ಲ್ಯಾಟ್ ಒಳಗಡೆ ನುಗ್ಗಿದ ಆರೋಪಿಯೋರ್ವ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಮನೆಯೊಳಗಿದ್ದ ಸಿಸಿಟಿವಿಯನ್ನು ಕಳವು ನಡೆಸಿದ್ದು, ಅಲ್ಲದೆ ಆರೋಪಿ ಸಹಿತ ಆತನ ಸಹೋದರ ಈ ಹಿಂದೆಯೂ 160 ಗ್ರಾಂ ಚಿನ್ನ ಇದೇ ಮನೆಯಿಂದ ಕಳವುಗೈದಿರುವ ಕುರಿತು ಮಹಿಳೆಯೋರ್ವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕುತ್ತಾರು ಜಂಕ್ಷನ್ ನಲ್ಲಿರುವ ಸಿಲಿಕಾನಿಯಾ ಅಪಾರ್ಟ್‍ಮೆಂಟ್ ನಲ್ಲಿರುವ ಖತೀಜಾ ಮೆಹಸರ್ ಎಂಬವರ ಫ್ಲ್ಯಾಟ್‍ನಲ್ಲಿ ಕಳವು ನಡೆದಿದೆ. ಮದನಿ ನಗರ ನಿವಾಸಿ ಅಬ್ದುಲ್ ಮುನೀರ್ ಮತ್ತು ಆತನ ಸಹೋದರ ಮೊಹಮ್ಮದ್ ಸಿರಾಜ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪೈಕಿ ಅಬ್ದುಲ್ ಮುನೀರ್ ನನ್ನು ತಡರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜು.2 ರಂದು ಅಬ್ದುಲ್ ಮುನೀರ್ ಫ್ಲ್ಯಾಟ್ ನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆಯೊಳಗೆ ನುಗ್ಗಿ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಸಿಸಿಟಿವಿ ಕಳವು ನಡೆಸಿದ್ದಾನೆ. ಈತ ಫ್ಲ್ಯಾಟ್ ಒಳಗೆ ಹೋಗಿರುವ ಕುರಿತು ಫ್ಲ್ಯಾಟ್ ಹೊರಗಡೆ ಇರುವ ಸಿಸಿಟಿವಿಯಲ್ಲಿ ದಾಖಲೆಗಳು ಸೆರೆಯಾಗಿದೆ.

ಈತ ಒಂದು ವರ್ಷದ ಹಿಂದೆ ಸಹೋದರ ಮೊಹಮ್ಮದ್ ಸಿರಾಜ್ ಎಂಬಾತನ ಜೊತೆಗೆ ಸೇರಿಕೊಂಡು ಇದೇ ಮನೆಯಿಂದ 160 ಗ್ರಾಂ ಚಿನ್ನವನ್ನು ಕಳವು ನಡೆಸಿದ್ದಾರೆಂದು ಆರೋಪಿಸಲಾಗಿದೆ. ಸಹೋದರರಿಬ್ಬರು ಕಳವು ನಡೆಸಿದ ಸೊತ್ತುಗಳನ್ನು ಮಾರಾಟ ಮಾಡಿ ಬೆಲೆಬಾಳುವ ಎರಡು ಕಾರುಗಳನ್ನು ಹೊಂದಿ ಅದರಲ್ಲಿ ಸುತ್ತಾಡುತ್ತಿರುವ ಮಾಹಿತಿಯನ್ನು ನೀಡಿದ್ದಾರೆ.

ಸ್ನಾನದ ದೃಶ್ಯ ಸೆರೆಹಿಡಿದು ಬಂಧಿತನಾಗಿದ್ದ ಆರೋಪಿ: ಆರೋಪಿ ಅಬ್ದುಲ್ ಮುನೀರ್ ಜ.20 ರಂದು ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೋರ್ವರನ್ನು ನೋಡುವ ಕಾರಣವೊಡ್ಡಿ, ಅಲ್ಲೇ ಇದ್ದ ಸಂಬಂಧಿ ಮಹಿಳೆ ಸ್ನಾನ ಮಾಡುವ ವೀಡಿಯೋವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಈ ಪ್ರಕರಣದಲ್ಲಿ ಉಳ್ಳಾಲ ಪೊಲೀಸರಿಂದಲೇ ಬಂಧಿತನಾಗಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಾತ ಮತ್ತೆ ಕಳವು ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.

ನಕಲಿ ಕೀ ಮೂಲಕ ಕೃತ್ಯ: ಖತೀಜಾ ಮೆಹಸರ್ ಪತಿ ಜೊತೆಗೆ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಮುನೀರ್, ಫ್ಲ್ಯಾಟ್ ನ ಕೀಯನ್ನು ಒಮ್ಮೆ ಪಡೆದುಕೊಂಡಿದ್ದನು. ಅದರ ನಕಲಿ ಕೀಯನ್ನು ತಯಾರಿಸಿದ್ದ ಆರೋಪಿ ಅದನ್ನೇ ಬಳಸಿಕೊಂಡು ಮನೆಯಲ್ಲಿ ಯಾರೂ ಇರದ ಸಂದರ್ಭವನ್ನು ಉಪಯೋಗಿಸಿ ಕಳವು ನಡೆಸಿದ್ದಾನೆ.

- Advertisement -

Related news

error: Content is protected !!