Sunday, May 5, 2024
spot_imgspot_img
spot_imgspot_img

ಬಂಟ್ವಾಳ: ವರದಕ್ಷಿಣೆ ಕಿರುಕುಳ – ನವ ವಿವಾಹಿತೆ ಆತ್ಮಹತ್ಯೆ

- Advertisement -G L Acharya panikkar
- Advertisement -
This image has an empty alt attribute; its file name is balavikas-866x1024.jpg

ಬಂಟ್ವಾಳ:ಗಂಡನ ಮನೆಯಲ್ಲಿನ ವರದಕ್ಷಿಣೆ ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದಿದ್ದ ನವ ವಿವಾಹಿತೆಯೋರ್ವಳು ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನ್ (22.ವ) ಮೃತಪಟ್ಟ ಮಹಿಳೆ.

ಸಜೀಪ ಮೂಡ ನಿವಾಸಿ ಕೆ.ಎಮ್ ಬಾವ ಅವರ ಮಗಳು ನೌಸೀನ್ ಅವರು ಉಳ್ಳಾಲ ಮೂಲದ ಅಜ್ಞಾನ್‌ ಎಂಬವರಿಗೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿ ಉಂಟಾಗಿ ಮನೆಯವರ ಒಪ್ಪಿಗೆ ಮುಖಾಂತರ ಅಗಸ್ಟ್ 14 ರಂದು ಮದುವೆಯಾಗಿತ್ತು. ಪ್ರೇಮವಿವಾಹ ಆದರೂ ಕೂಡ ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಗಂಡ ಅಜ್ಞಾನ್ ಮದುವೆಯಾದ ಕೆಲವೇ ದಿನಗಳಲ್ಲಿ ನೌಸೀನ್ ಳ ಒಡವೆಗಳನ್ನು ಮಾರಿದ್ದಾನೆ. ಜೊತೆಗೆ ಇನ್ನಷ್ಟು ಒಡೆವೆಗಳನ್ನು ತರುವಂತೆ ಪೀಡಿಸುತ್ತಿದ್ದ. ಇದು ಅಲ್ಲದೆ, ಅತ್ತೆ ಮತ್ತು ನಾದಿನಿಯವರು ಲವ್ ಮ್ಯಾರೇಜ್ ಆಗಿರುವ ಕಾರಣಕ್ಕಾಗಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ಈ ವಿಚಾರವನ್ನು ತವರು ಮನೆಯವರಲ್ಲಿ ತಿಳಿಸಿದ್ದಳು. ಗಂಡನ ಮನೆಯವರ ಕಿರುಕುಳ ತಾಳಲಾರದೆ ನೌಸೀನ್ ಅ.24 ರಂದು ತಾಯಿ ಮನೆಗೆ ಬಂದಿದ್ದಳು. ಮರುದಿನ ಮನೆಯವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಇವಳು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಇವಳ ಸಾವಿಗೆ ಗಂಡ ಮತ್ತು ಅತ್ತೆ, ನಾದಿನಿಯವರೇ ಕಾರಣ, ಹಾಗಾಗಿ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ನೌಸೀನ್ ಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ನೌಸೀನ್ ಳ ಸಂಬಂಧಿ ಸಿದ್ದೀಕ್ ಒತ್ತಾಯ ಮಾಡಿದ್ದಾರೆ.

- Advertisement -

Related news

error: Content is protected !!