ನಾವು ಬೇಕಂತ ಕಟ್ಟಿದ್ದಲ್ಲ…! ಗೊತ್ತಿಲ್ಲದೇ ಕಟ್ಟಿದ್ದು…! : ಸೊಸೈಟಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್




ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸುಮಾರು 70 ಲಕ್ಷ ರೂಪಾಯಿ ವೆಚ್ಚದಡಿ ಕೋಡಿಂಬಾಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ.
ಕಟ್ಟಡ ನಿರ್ಮಾಣ ಬಿರುಸಿನಿಂದ ನಡೆಯುತ್ತಿತ್ತು. ಗ್ರಾಮ ಪಂಚಾಯತ್‌ನಿಂದ ಯಾವುದೇ ಪರವಾನಿಗೆ ಪಡೆಯದೇ, ಇಲಾಖೆಯ 9/11 ಇಲ್ಲದೆ, ಕನ್ವರ್ಷನ್ ಮಾಡದೆ ಕಟ್ಟಡ ಕಟ್ಟುತ್ತಿರುವುದು ಸಾರ್ವಜನಿಕರ ಆಕ್ಷೇಪಣೆಗೆ ಕಾರಣವಾಗಿದೆ. ಈರ್ವರು ಗ್ರಾಮಸ್ಥರು ಪಂಚಾಯತಿಗೆ ದೂರು ನೀಡಿದ್ದು ಕಟ್ಟಡ ನಿರ್ಮಿಸಲು ಪಂಚಾಯತಿಗೆ ಅರ್ಜಿ ಕೊಟ್ಟಿದ್ದಾರ?ಪರವಾನಿಗೆ ಪಡೆದುಕೊಂಡಿದ್ದಾರ ಎಂದು ಪ್ರಶ್ನಿಸಿದ್ದ ಗ್ರಾಮಸ್ಥರು ಅನುಮತಿ ಪಡೆಯದೆ ಹೇಗೆ ಕಟ್ಟೆ ಕಟ್ಟುತ್ತಿದ್ದಾರೆ ಎಂದು ಪರಿಶೀಲಿಸಬೇಕೆಂದು ಮನವಿ ಮಾಡಿದ್ದರು.
ಇದೀಗ ದೂರುದಾರರು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ಬನ್ನೂರು ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ನೀಡಿರುವ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ 9/11ಕೊಡತಕ್ಕದ್ದು ಮತ್ತು ಎಷ್ಟು ಚದರ ಮೀಟರ್ ಕಟ್ಟಡ ಇವೆ ಮತ್ತು ಎಷ್ಟು ಸೆನ್ಸ್ ಜಾಗ ಇದೆ ಎಂಬುದನ್ನು ಧೃಡಕರಿಸಬೇಕು ಎಂದು ಒತ್ತಾಯಿಸಿದ್ದು ಇದರ ಜಿಪಿಎಸ್ ಫೋಟೋ ಕೂಡ ಕೊಟ್ಟಿದ್ದಾರೆ. ಮುಂದಿನ ದಿವಸಗಳಲ್ಲಿ ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇವೆ ಎಂಬುದನ್ನು ಕೂಡ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಮಧ್ಯೆ ಬನ್ನೂರು ಸಹಕಾರಿ ಸಂಘದ ಅಧ್ಯಕ್ಷರು ನಗರಾಭಿವೃದ್ಧಿ ಅಧಿಕಾರಿಗಳಿಗೆ ರಾಜಕೀಯ ಮೂಲಕ ಒತ್ತಡ ಹಾಕಿದ್ದು ಗುಪ್ತವಾಗಿ ಉಳಿದಿಲ್ಲ ಎಂದು ಚರ್ಚೆ ಆಗುತ್ತಿದೆ. ಮೊದಲು ದೂರುದಾರರು ಬನ್ನೂರು ಸಹಕಾರಿ ಸೊಸೈಟಿಯ ವಿರುದ್ಧ ಸಹಕಾರ ಇಲಾಖೆ ಮತ್ತು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು. ಈ ವೇಳೆ ಸೊಸೈಟಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ನಾವು ಬೇಕಂತ ಕಟ್ಟಿದಲ್ಲ.. ಗೊತ್ತಿಲ್ಲದೇ ಮಾಡಿದ್ದು..!!”ಎಂದು ಸ್ಪಷ್ಟನೆ ನೀಡಿರುವುದು ಕೂಡ ಬಹಿರಂಗವಾಗಿದೆ. ಇದೀಗ ನಗರ ಪ್ರಾಧಿಕಾರದಿಂದ ಅನುಮತಿ ಬಾಕಿ ಇದೆ. ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.








