Sunday, January 26, 2025
spot_imgspot_img
spot_imgspot_img

ಉಪ್ಪಿನಂಗಡಿ: ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!

- Advertisement -
- Advertisement -

ಉಪ್ಪಿನಂಗಡಿ: ನಿರ್ಮಾಣ ಹಂತದಲ್ಲಿರುವ ಗ್ರಾ.ಪಂ.ನ ಗ್ರಂಥಾಲಯ ಕಟ್ಟಡದಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ನಡೆದಿದೆ. ಕೊಲೆ ಶಂಕೆ ವ್ಯಕ್ತವಾಗಿದೆ.

ಸುಮಾರು 45 ವರ್ಷ ಪ್ರಾಯದ ಹಿಂದಿ ಮೂಲದ ಅಪರಿಚಿತ ವ್ಯಕ್ತಿಯನ್ನು ತಲೆಗೆ ಕಲ್ಲು ಅಥವಾ ಇನ್ನಿತರ ಸಲಕರಣೆಗಳಿಂದ ಹೊಡೆದು ಕೊಲೆಗೈದಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಅರ್ಧ ಕಂಬಳಿ ಹೊದಿಸಿ ಮಲಗಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸ್ವಲ್ಪ ದೂರದಲ್ಲಿ ಮೊಬೈಲ್ ಫೋನೊಂದು ಕಂಡುಬಂದಿದ್ದು, ಅದರ ಸಿಮ್ ಅನ್ನು ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ನಿಲ್ದಾಣ ಬಳಿಯಿರುವ ಈ ನಿರ್ಮಾಣ ಹಂತದ ಕಟ್ಟಡವು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗೆ ಸೇರಿದ್ದಾಗಿದೆ. ಗ್ರಂಥಾಲಯ ನಿರ್ಮಾಣಕ್ಕಾಗಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮಳೆ ಇದ್ದ ಕಾರಣ ಸೋಮವಾರ, ಮಂಗಳವಾರ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಕಾರ್ಮಿಕರು ಕೆಲಸಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!