Wednesday, April 24, 2024
spot_imgspot_img
spot_imgspot_img

ಏಳು ಲಕ್ಷದ ಆಭರಣ ಖರೀದಿಸಿ ನಕಲಿ ಚೆಕ್ ನೀಡಿ ವಂಚನೆ – ದಂಪತಿಗಳ ಮೇಲೆ ಪ್ರಕರಣ ದಾಖಲು

- Advertisement -G L Acharya panikkar
- Advertisement -

ಮಂಗಳೂರು (ಅ.22): ಏಳು ಲಕ್ಷದ ಆಭರಣ ಖರೀದಿಸಿದ ಮೇಲೆ ನಕಲಿ ಚೆಕ್ ನೀಡಿ ವಂಚಿಸಿದ ಆರೋಪದಲ್ಲಿ ಇದೀಗ ದಂಪತಿಗಳಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಆರೋಪಿ ಫರೀದಾ ಬೇಗಮ್ ರವರನ್ನು ಮನೆಯಿಂದ ಬಂಧಿಸಲಾಗಿದೆ. ಪತಿ ರಮೀಜ್ ತಲೆ ಮರೆಸಿಕೊಂಡಿರುವ ಬಗ್ಗೆ ವರದಿಯಾಗಿದೆ.ಫರೀದಾ ಮತ್ತು ರಮೀಜ್ ಮತ್ತೂರಿನವರು. ಕೈಕಾಂಬಾದ ಆಭರಣ ಸಂಸ್ಥೆಯಿಂದ ಖರೀದಿಸಿದ 7.3 ಲಕ್ಷ ಮೌಲ್ಯದ ಆಭರಣಗಳಿಗೆ ಪಾವತಿಯ ನಿಟ್ಟಿನಲ್ಲಿ ಬ್ಯಾಂಕಿನ ಚೆಕ್ ನೀಡಿದ್ದರು. ಚೆಕ್‌ನಲ್ಲಿದ್ದ ಸಹಿ ಬ್ಯಾಂಕ್ ನಲ್ಲಿ ತಾಳೆಯಾಗದಿದ್ದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಆಭರಣ ಅಂಗಡಿಯ ಮಾಲೀಕರು ಕಳೆದ ವಾರದಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಫರೀದಾ ಇರುವ ಸ್ಥಳವನ್ನು ಪತ್ತೆ ಹಚ್ಚಿ ಆಕೆಯನ್ನು ಬಂಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಜ್ಪೆ ಪೊಲೀಸರು ಈಗ ರಮೀಜ್ ಅವರನ್ನು ಹುಡುಕುತ್ತಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Related news

error: Content is protected !!