Wednesday, July 2, 2025
spot_imgspot_img
spot_imgspot_img

ಉಪ್ಪಿನಂಗಡಿ: ಜಲೀಲ್ ಕರೋಪಾಡಿ ಕೊಲೆ ಆರೋಪಿ ಪ್ರಜ್ವಲ್ ರೈ ಪಾತಾಜೆ ತಂಡದಿಂದ ತಲ್ವಾರ್ ದಾಳಿ; ಇಬ್ಬರು ಗಂಭೀರ

- Advertisement -
- Advertisement -

ಉಪ್ಪಿನಂಗಡಿ: ರಾಜ್ಯವನ್ನೇ ಬೆಚ್ಚಿಬಿಳಿಸಿದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೈ ಪಾತಾಜೆ ತಂಡದಿಂದ ತಲ್ವಾರ್ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ನೆಕ್ಕಿಲಾಡಿ ಪೆಟ್ರೋಲ್ ಬಂಕ್ ಸಮೀಪದಲ್ಲಿ ಇಂದು ಸಂಜೆ ಸ್ಕೂಟರ್ ನಲ್ಲಿ ಇಬ್ಬರು ಹೋಗುತ್ತಿರುವಾಗ ತಡೆದು ತಲ್ವಾರ್‌ನಿಂದ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ದೊರಕಿದೆ.

ಗಂಭೀರ ಗಾಯಗೊಂಡು ಇಬ್ಬರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರು ದೀಕ್ಷಿತ್ ರೈ ಮತ್ತು ಸ್ವಸ್ತಿಕ್‌ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ದೀಕ್ಷಿತ್ ರೈ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಸ್ವಸ್ತಿಕ್‌ ಎಂಬಾತನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೆಲ ದಿನಗಳ ಹಿಂದೆ ಕೇರಳ ದೇವಸ್ಥಾನಕ್ಕೆ ಕನ್ನಡ ಚಿತ್ರನಟ ದರ್ಶನ್ ಜೊತೆ ಪ್ರಜ್ವಲ್ ರೈ ಭೇಟಿ ನೀಡಿದ ಫೋಟೋ ವೈರಲ್ ಆಗಿತ್ತು.ಕೇರಳದಲ್ಲಿ ರೇಣುಕಾ ಸ್ವಾಮಿ ಕೊಲೆ ಆರೋಪಿಯೊಂದಿಗೆ ಜಲೀಲ್ ಕರೋಪಾಡಿ ಕೊಲೆ ಆರೋಪಿ ಎಂಬ ಶೀರ್ಷಿಕೆಯಲ್ಲಿ ಮಾಧ್ಯಮದಲ್ಲಿ ವರದಿಯಾಗಿತ್ತು.

ಗಾಯಗೊಂಡವರಲ್ಲಿ ಸ್ವಸ್ತಿಕ್‌ ಎಂಬಾತನು ಪ್ರಜ್ವಲ್ ರೈ ತಂಡದ ಸದಸ್ಯ ಎಂದು ಸಾರ್ವಜನಿಕರಿಂದ ತಿಳಿದುಬಂದಿದೆ. ಪ್ರಕರಣದ ಬಗ್ಗೆ ಈ ತನಕ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.

- Advertisement -

Related news

error: Content is protected !!