- Advertisement -
- Advertisement -



ಉಪ್ಪಿನಂಗಡಿ ಠಾಣಾ ಅ.ಕ್ರ 58/2021 U/S 379 ಐಪಿಸಿ ಪ್ರಕರಣದ ಆರೋಪಿ ಯತಿರಾಜ್ 34 ವರ್ಷ ಮಂಜೇಶ್ವರ ಕಾಸರಗೋಡು ಎಂಬಾತನು ಪ್ರಕರಣದ ವಿಚಾರಣೆಯ ವೇಳೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ 2022 ರಿಂದ ತಲೆಮರೆಸಿಕೊಂಡಿರುತ್ತಾನೆ.ಸುಮಾರು ಏಳು ಬಾರಿ ಮಾನ್ಯ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿದ್ದು ಇಲ್ಲಿಯವರೆಗೆ ಕೋರ್ಟಿಗೆ ಹಾಜರಾಗದೆ ತಲೆಮರಿಸಿಕೊಂಡಿದ್ದ. ಆತನನ್ನು ಉಪ್ಪಿನಂಗಡಿ ಪೊಲೀಸರು ದಿನಾಂಕ 22-07-2025 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಆರೋಪಿತನು ಜಾಮೀನಿನ ಮೇಲೆ ಬಿಡುಗಡೆಗೊಂಡು ಆ ಬಳಿಕ ಮಾನ್ಯ ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:65/2025 ಕಲಂ 269 BNS 2023 ರಂತೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.
- Advertisement -








