Tuesday, June 23, 2026
spot_imgspot_img
spot_imgspot_img

ಉಪ್ಪಿನಂಗಡಿ: ಕಳ್ಳತನ ಮಾಡಲು ಮಾಡಿದ ಪ್ಲ್ಯಾನ್ ವಿಫಲ..! ಸ್ಥಳದಿಂದ ಕಾಲ್ಕಿತ್ತ ಚೋರರು..!

- Advertisement -
- Advertisement -

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪದ್ಮುಂಜದ ಮಲೆಂಗಲ್ಲು ಎಂಬಲ್ಲಿ ವಿಫಲ ಕಳವು ಯತ್ನ ನಡೆದಿದೆ. ಮಲೆಂಗಲ್ಲು ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಕಳ್ಳರು ಕಳ್ಳತನಕ್ಕೆ ಸಂಚು ರೂಪಿಸಿ ವಿಫಲಗೊಂಡು ಪರಾರಿಯಾಗಿದ್ದಾರೆ.

ಮನೆಯ ಹಿಂಬದಿ ಕಿಟಕಿಯಿಂದ ಬಿದಿರಿನ ಕೊಕ್ಕೆಯನ್ನು ಉಪಯೋಗಿಸಿಮನೆಯ ಬಾಗಿಲಿಗೆ ಒಳಗಿನಿಂದ ಹಾಕಿರುವ ಚಿಲಕವನ್ನು ತೆಗೆಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡಿದ್ದಾರೆ.

ಮನೆಯವರು ಲೈಟ್ ಹಾಕಿದಾಗ ಕಳ್ಳರು ಕಳ್ಳತನಕ್ಕೆ ಉಪಯೋಗಿಸಿದ್ದ ಬಿದಿರಿನ ಕೊಕ್ಕೆ, ಕುರ್ಚಿ ಹಾಗೂ ಟಾರ್ಚ್ ಲೈಟನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ಮನೆಯಲ್ಲಿ ಮನೆಯವರು ಮಲಗಿದ್ದ ವೇಳೆ ಕಳ್ಳತನ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!