


ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (UPSC) UPSC ನಾಗರಿಕ ಸೇವಾ ಪರೀಕ್ಷೆ (CSE) 2025 ರ ಅಂತಿಮ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದೆ. ಈ ಫಲಿತಾಂಶದೊಂದಿಗೆ 2024ರ ಯುಪಿಎಸ್‌ಸಿ ಪರೀಕ್ಷೆಯ ಸೈಕಲ್ ಅಂತ್ಯವಾಗಿರುವುದನ್ನು ಸೂಚಿಸಿದೆ. ಇದರಲ್ಲಿ ಸೆಪ್ಟೆಂಬರ್ 2024 ರಲ್ಲಿ ಲಿಖಿತ ಪರೀಕ್ಷೆ ಮತ್ತು ಜನವರಿ ಮತ್ತು ಏಪ್ರಿಲ್ 2025 ರ ನಡುವೆ ನಡೆದ ವ್ಯಕ್ತಿತ್ವ ಪರೀಕ್ಷೆ/ಸಂದರ್ಶನಗಳು ಸೇರಿವೆ.
ವಾರಣಾಸಿಯ ಶಕ್ತಿ ದುಬೆ ಯುಪಿಎಸ್‌ಸಿ ಸಿಎಸ್‌ಇ 2025 ರಲ್ಲಿ 1 ನೇ ಶ್ರೇಯಾಂಕ ಗಳಿಸಿ ವರ್ಷದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರಿಯಾಣದ ಹರ್ಷಿತಾ ಗೋಯಲ್ 2 ನೇ ಶ್ರೇಯಾಂಕ ಗಳಿಸಿದ್ದರೆ, ಡೊಂಗ್ರೆ ಅರ್ಚಿತ್ ಪರಾಗ್ 3 ನೇ ಸ್ಥಾನ ಗಳಿಸಿದ್ದಾರೆ. ಹರ್ಷಿತಾ ಗೋಯಲ್ ವಡೋದರಾದಲ್ಲಿ ಹುಟ್ಟಿ ಬೆಳೆದರು ಮತ್ತು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಕೇಂದ್ರ ಸೇವೆಗಳ ಗ್ರೂಪ್ ಎ ಮತ್ತು ಬಿ ನಂತಹ ಸೇವೆಗಳಲ್ಲಿ ನೇಮಕಾತಿಗಾಗಿ ಯುಪಿಎಸ್‌ಸಿ 1009 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಸಂದರ್ಶನಗಳಿಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಅಂತಿಮ ಆಯ್ಕೆಯ ಸ್ಥಿತಿಯನ್ನು ಅಧಿಕೃತ UPSC ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.








