Thursday, October 1, 2026
spot_imgspot_img
spot_imgspot_img

ರಾಜ್ಯದ SSLC ಪರೀಕ್ಷಾ ಶುಲ್ಕದಲ್ಲಿ ಶೇ.5ರಷ್ಟು ಹೆಚ್ಚಳ

- Advertisement -
- Advertisement -

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ವನ್ನು ಶೇ.5ರಷ್ಟು ಹೆಚ್ಚಳ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಆದೇಶ ಹೊರಡಿಸಿದ್ದು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ನಡೆಸಲಾಗುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ನೋಂದಣಿಯಾಗುವ ವಿದ್ಯಾರ್ಥಿಗಳಿಂದ ಉಲ್ಲೇಖಿತ-1ರ ಸರ್ಕಾರದ ಆದೇಶದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಶುಲ್ಕವನ್ನು ಶೇಕಡಾ 5 ರಷ್ಟು ಪ್ರತಿ ವರ್ಷ ಹೆಚ್ಚಿಸಿ ಪರೀಷ್ಕರಿಸಲು ಆದೇಶವಾಗಿರುತ್ತದೆ.

ಅದರನ್ವಯ 2025- 26ನೇ ಸಾಲಿಗೆ ಪರೀಕ್ಷಾ ನೋಂದಣಿಗೆ ಅರ್ಜಿಗಳನ್ನು ಆಹ್ವಾನಿಸುವ ಹಿನ್ನೆಲೆ 2025-26ರ ಸಾಲಿನಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕೆ ಶೇಕಡಾ 5 ರಷ್ಟು ಸೇರಿಸಿ ಪರೀಕ್ಷಾ ಶುಲ್ಕವನ್ನು ಕೆಳಕಂಡಂತೆ ಪರಿಷ್ಕರಿಸಿದೆ ಎಂದು ತಿಳಿಸಿದ್ದಾರೆ.ಹೀಗಿದೆ ಎಸ್ ಎಸ್ ಎಲ್ ಸಿ ಪರೀಕ್ಷಾ ಶುಲ್ಕದ ಹೆಚ್ಚಳ ವಿವರಎಸ್ ಎಸ್ ಎಲ್ ಸಿ ಪರೀಕ್ಷಾ ಶುಲ್ಕ ( CCERF & CCEPF) ವಿದ್ಯಾರ್ಥಿಗಳು- ರೂ.676 ಇದ್ದಂತ ಶುಲ್ಕವನ್ನು ರೂ.710ಕ್ಕೆ ಏರಿಕೆ ಮಾಡಲಾಗಿದೆ.ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕವನ್ನು ರೂ.236ರಿಂದ ರೂ.248ಕ್ಕೆ ಹೆಚ್ಚಳ ಮಾಡಲಾಗಿದೆ.ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕವನ್ನು ರೂ.69 ಇದ್ದದ್ದು ರೂ.72ಕ್ಕೆ ಹೆಚ್ಚಿಸಲಾಗಿದೆ.

ಇನ್ನೂ ಪುನರಾವರ್ತಿ ಶಾಲಾ, ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಒಂದು ವಿಷಯಕ್ಕೆ ರೂ.427 ಇದ್ದದ್ದು ರೂ.448ಕ್ಕೆ ಏರಿಸಲಾಗಿದೆ.ಎರಡು ವಿಷಯಕ್ಕೆ ರೂ.532 ಇದ್ದದ್ದನ್ನು ರೂ.559ಕ್ಕೆ ಹೆಚ್ಚಳ ಮಾಡಲಾಗಿದೆ.ಮೂರು ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ ರೂ.716 ಇದ್ದ ಶುಲ್ಕವನ್ನು ರೂ.752ಕ್ಕೆ ಹೆಚ್ಚಿಸಲಾಗಿದೆ.ಈ ಮೇಲ್ಕಂಡಂತೆ ದರಗಳನ್ನು 2025-26ನೇ ಸಾಲಿನಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಅನ್ವಯವಾಗುವಂತೆ ದರ ಪರಿಷ್ಕರಿಸಿರುವುದಾಗಿ ಆದೇಶದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.

- Advertisement -

Related news

error: Content is protected !!