ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಸಹಭಾಗಿತ್ವದಲ್ಲಿ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರಿಂದ ಉಚಿತ ವೈದ್ಯಕೀಯ ಶಿಬಿರ ಉರಿ ಮಜಲು ಇಡ್ಕಿದು ಸೇವಾ ಸಹಕಾರಿ ಸಂಘದ ಶತಾಮೃತ ಆವರಣದಲ್ಲಿ ನಡೆಯಿತು.
ಬಿ ಸುಧಾಕರ ಶೆಟ್ಟಿ ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಇವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದ ಉದ್ಘಾಟನಾ ಸಮಾರಂಭವನ್ನು ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಬಳಿಕ ಶಿಬಿರಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮೋಹಿನಿ ಜಯಕರ ಅಧ್ಯಕ್ಷರು ಇಡ್ಕಿದು ಗ್ರಾಮ ಪಂಚಾಯತ್, ರೊ| ಮೊಹಮ್ಮದ್ ಸಾಹೇಬ್ ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರು ಸಿಟಿ, ಡಾ. ಕೀರ್ತನ್ ಶೆಟ್ಟಿ BAMS,MD (Ayu) ನಮನ ಕ್ಲಿನಿಕ್ ಉರಿ ಮಜಲು, ಡಾ. ಭೂಷಣ್ ಶೆಟ್ಟಿ MD, DR, ಕಿಡ್ನಿ ಮತ್ತು ಮೂತ್ರರೋಗ ತಜ್ಞರು, ಡಾ. ಅಭಿಷೇಕ್ ಕೃಷ್ಣ MD, DNB ಕ್ಯಾನ್ಸರ್ ರೋಗ ತಜ್ಞರು, ರೊ| ರಾಮಚಂದ್ರ ಕಾರ್ಯದರ್ಶಿ ರೋಟರಿ ಕ್ಲಬ್ ಪುತ್ತೂರು ಸಿಟಿ, ಈಶ್ವರ ನಾಯ್ಕ ಎಸ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎನ್ ರಾಮ್ ಭಟ್ ಉಪಾಧ್ಯಕ್ಷರು ಇವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಕ್ಯಾನ್ಸರ್ ರೋಗ ಮಾಹಿತಿ ಮತ್ತು ತಪಾಸಣೆ, ಕಿಡ್ನಿ ಮತ್ತು ಮೂತ್ರ ರೋಗ, ಕಿವಿ ಮೂಗು ಗಂಟಲು ತಪಾಸಣೆ, ಶ್ರೀ ರೋಗ ತಪಾಸಣೆ, ಸಾಮಾನ್ಯ ತಪಾಸಣೆ, ಎಲುಬು ಮತ್ತು ಕೀಲು ತಪಾಸಣೆ, ಕಣ್ಣಿನ ಪರೀಕ್ಷೆ, ಹೃದಯ ರೋಗ ಮತ್ತು ಇ.ಸಿ.ಜಿ ಉಚಿತ ತಪಾಸಣಾ ಸೇವೆಗಳನ್ನು ನಡೆಸಲಾಯಿತು.
ಶಿಬಿರದಲ್ಲಿ ಇಡ್ಕಿದು, ಕುಳ ಎರಡು ಗ್ರಾಮಗಳ ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡು ನುರಿತ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಸ್ವಾಗತಿಸಿ, ರಾಮಚಂದ್ರ ಧನ್ಯವಾದವಿತ್ತರು. ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.