Saturday, August 1, 2026
spot_imgspot_img
spot_imgspot_img

ಪಡುಬಿದ್ರಿ: ಪೇಸ್ಟ್ ಎಂದು ಇಲಿ ಪಾಷಾಣದಿಂದ ಹಲ್ಲುಜ್ಜಿದ್ದ ವ್ಯಕ್ತಿ ಸಾವು

- Advertisement -
- Advertisement -

ಪಡುಬಿದ್ರಿ: ಪೇಸ್ಟ್ ಎಂದು ಭಾವಿಸಿ ಟ್ಯೂಬ್‌ನಲ್ಲಿದ್ದ ಇಲಿ ಪಾಷಾಣದಿಂದ ಹಲ್ಲುಜ್ಜಿದ್ದ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ವರದಿಯಾಗಿದೆ.

ಇನ್ನಾ ಗ್ರಾಮದ ಮಡ್ಮಿನ್ ನಿವಾಸಿ ವೆಂಕಪ್ಪ ಪೂಜಾರಿ(53) ಅವರು ಪೇಸ್ಟ್ ಎಂದು ಭಾವಿಸಿ ಟ್ಯೂಬ್‌ನಲ್ಲಿದ್ದ ಇಲಿ ಪಾಷಾಣದಿಂದ ಹಲ್ಲುಜ್ಜಿ ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣಾ ವರದಿಯು ತಿಳಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!