Thursday, July 3, 2025
spot_imgspot_img
spot_imgspot_img

ಉರಿಮಜಲು: ರಾಯಲ್ ಪ್ಲೇ ಸ್ಟೇಡಿಯಂ (play smart) ಉದ್ಘಾಟನಾ ಸಮಾರಂಭ- ವಿಟ್ಲ ಪರಿಸರದಲ್ಲಿ ವಿವಿಧ ಕ್ರೀಡೆಗಳಿಗಾಗಿ ನಿಮಾರ್ಣವಾಗಿದೆ ಸುಸಜ್ಜಿತ ಇಂಡೋರ್ ಸ್ಟೇಡಿಯಂ

- Advertisement -
- Advertisement -

ವಿಟ್ಲ ಉರಿಮಜಲು ಇಲ್ಲಿನ ಲಕ್ಷ್ಮೀ ಫ್ಯೂಯೆಲ್‌ ಹತ್ತಿರದಲ್ಲಿ ನಿರ್ಮಾಣಗೊಂಡ ರಾಯಲ್ ಪ್ಲೇ ಸ್ಟೇಡಿಯಂ (play smart) ಇದರ ಉದ್ಘಾಟನಾ ಕಾರ್ಯಕ್ರಮ ಮೇ 27 ನೇ ಸೋಮವಾರದಂದು ನಡೆಯಿತು.

ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಯು ಟಿ ಖಾದರ್ ವಿಧಾನಸಭಾ ಸಭಾಧ್ಯಕ್ಷರು ಕರ್ನಾಟಕ ಸರಕಾರ ಇವರು ರಿಬ್ಬನ್‌ ಕತ್ತರಿಸಿ ಬಳಿಕ ಕ್ರಿಕೆಟ್‌ ಆಡುವ ಮೂಲಕ ಸ್ಟೇಡಿಯಂನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಂ ಎಸ್ ಮಹಮ್ಮದ್ ಮಾಜಿ ಉಪಾಧ್ಯಕ್ಷರು ದ ಕ ಜಿಲ್ಲಾ ಪಂಚಾಯತ್, ಮೋಹನ್ ಭಟ್ ಮಾಲಕರು ಲಕ್ಷ್ಮೀ ಫ್ಯೂಯೆಲ್ ಉರಿಮಜಲು, ವಿ ಕೆ ಎಂ ಅಶ್ರಫ್ ಸದಸ್ಯರು ಪಟ್ಟಣ ಪಂಚಾಯತ್, ಅಶ್ರಫ್ ಮಹಮ್ಮದ್ ಪೊನ್ನೊಟ್ಟು ಅಧ್ಯಕ್ಷರು ಕೇಂದ್ರ ಜುಮಾ ಮಸೀದಿ ವಿಟ್ಲ, ರೆ. ಅಶೋಕ್ ರಾಯನ್ ಕ್ರಾಸ್ತಾ ಪ್ರಾಂಶುಪಾಲರು ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಹಾಜಿ ಮಹಮ್ಮದ್ ಹನೀಫ್ ಗೋಳ್ತಮಜಲು, ಅಧ್ಯಕ್ಷರು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲು, ರಶೀದ್ ವಿಟ್ಲ ಅಧ್ಯಕ್ಷರು ಜಂಯತುಲ್ ಫಲಾಹ್ ಬಂಟ್ವಾಳ, ಶಾಕೀರ್ ಅಳಕೆಮಜಲು ಪ್ರಧಾನ ಕಾರ್ಯದರ್ಶಿ ಡಿ ಗ್ರೂಪ್ ವಿಟ್ಲ, ಸುಧಾಕರ್ ಶೆಟ್ಟಿ ಅಧ್ಯಕ್ಷರು ಸೇವಾ ಸಹಕಾರಿ ಬ್ಯಾಂಕ್ ಇಡ್ಕಿದು ಉರಿಮಜಲ್, ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು ಉದ್ಯಮಿ ಬೆಂಗಳೂರು, ಅಬೂಬಕರ್ ಪುತ್ತು ರಿಫಾಯಿ ಟ್ರೇಡಿಂಗ್ ಉಪ್ಪಿನಂಗಡಿ, ಸಿದ್ದಿಕ್ ಕಂಬಳಬೆಟ್ಟು ಗ್ರಾ ಪಂ ಸದಸ್ಯರು ವಿಟ್ಲ ಮುಡ್ನೂರು, ಸಿದ್ದಿಕ್ ಉರಿಮಜಲು ಗ್ರಾ ಪಂ ಸದಸ್ಯರು ಇಡ್ಕಿದು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಉದ್ಘಾಟನೆಗೊಂಡ ರಾಯಲ್ ಪ್ಲೇ ಸ್ಟೇಡಿಯಂಗೆ ಶುಭ ಹಾರೈಸಿದರು.

ಸುಸಜ್ಜಿತ ವ್ಯವಸ್ಥೆಯೊಂದಿಗೆ ವಿವಿಧ ಕ್ರೀಡೆಗಳಾದ ಫುಟ್‌ಬಾಲ್‌, ಬ್ಯಾಡ್ಮಿಂಟನ್‌, ಕ್ರಿಕೆಟ್‌, ವಾಲಿಬಾಲ್‌ ಸೇರಿದಂತೆ ಇನ್ನಿತರ ಕ್ರೀಡೆಗಳಿಗೆ ಅನುಗುಣವಾಗಿ ವಿವಿಧ ವಿನ್ಯಾಸದ ವಿನೂತನ ಶೈಲಿಯ ಇಂಡೋರ್ ಸ್ಟೇಡಿಯಂ ಲಭ್ಯವಿದ್ದು ಕ್ರೀಡಾಪಟುಗಳಿಗೆ ವಿಟ್ಲ ಪರಿಸರದಲ್ಲಿ ಒಂದು ಒಳ್ಳೆಯ ಸೌಲಭ್ಯ ಸಿಗಲಿದೆ.

ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ನೀಡಿ
ರಾಯಲ್ ಪ್ಲೇ ಸ್ಟೇಡಿಯಂ (play smart)
ಲಕ್ಷ್ಮೀ ಫ್ಯೂಯೆಲ್‌ ಹತ್ತಿರ
ಉರಿಮಜಲು, ವಿಟ್ಲ-ಪುತ್ತೂರು ರಸ್ತೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9686340262

- Advertisement -

Related news

error: Content is protected !!