Friday, May 10, 2024
spot_imgspot_img
spot_imgspot_img

ಅಲೋವೆರದ ಉಪಯೋಗಗಳು

- Advertisement -G L Acharya panikkar
- Advertisement -

ಅಲೋವೆರಾ ನಮ್ಮ ತ್ವಚೆಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಇದು ಚರ್ಮಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಸಹಾಯಕವಾಗಿದೆ. ವಿಶೇಷವಾಗಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲೋವೆರಾ ರಸವನ್ನು ನಿತ್ಯ ಸೇವಿಸುತ್ತಾ ಬಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲೋವೆರಾದಲ್ಲಿ ಆಂಟಿ ಇನ್ ಫ್ಲಮೇಟರಿ, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟಿರಿಯಾ ಗುಣಗಳಿವೆ. ಇದಲ್ಲದೆ, ವಿಟಮಿನ್ ಎ. ಸಿ. ಇ. ಫೋಲಿಕ್ ಆಸಿಡ್, ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ.

ಅಲೋವೆರದ ಗುಣಲಕ್ಷಣಗಳು ಮತ್ತು ಪ್ರಯೋಜನಗಳು ಏನೆಂದರೆ, ಏಲೋವೆರ ಆಂಟಿ ಇಂಪ್ಲಾಮೇಟರಿ ಮತ್ತು ಆಂಟಿ ಸೆಪ್ಟಿಕ್ ಆಗಿ ಕೆಲಸ ಮಾಡುತ್ತದೆ. ಎಲ್ಲಿಯಾದರೂ ಗಾಯ ಆಗಿದ್ದರೆ ಅಥವಾ ಸೆಪ್ಟಿಕ್ ಆಗಿದ್ದರೆ ಅಲ್ಲಿ ಮುಂದೆ ಮತ್ತೆ ಸೆಪ್ಟಿಕ್ ಆಗದಂತೆ ತಡೆಯುತ್ತದೆ ಹಾಗೆ ಯಾವುದೇ ಒಂದು ಕ್ರಿಮಿ ಕೀಟಗಳ ವಿರುದ್ಧವೂ ಸಹ ಹೋರಾಡಲು ಸಹಾಯ ಮಾಡುತ್ತದೆ. ಅಲೋವೆರ ಕಹಿ ಅಂಶವನ್ನು ಹೊಂದಿರುವುದರಿಂದ ಇದು ಡಯಾಬಿಟಿಸ್‌ ಅನ್ನು ನಿಯಂತ್ರಣ ಮಾಡುತ್ತದೆ.

ಅಲೋವೆರಾ ರಸಕ್ಕೆ ಅರಿಶಿನ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಲಿವರ್‌ ಸಮಸ್ಯೆ ಕಡಿಮೆಯಾಗುತ್ತದೆ.ಪಿತ್ತ ಹೆಚ್ಚಾಗಿ ಕಣ್ಣುಗಳು ಉರಿಯುತ್ತಿದ್ದರೆ ಅಲೋವೆರಾ ತಿರುಳನ್ನು ಕಣ್ಣುಗಳ ಮೇಲೆ ಲೇಪಿಸಿದರೆ ಕಣ್ಣು ಉರಿ ಕಡಿಮೆಯಾಗುತ್ತದೆ.ಅಲೋವೆರಾ ರಸಕ್ಕೆ ಅರಿಶಿನ ಬೆರೆಸಿ ಬಾಯಿ ಹುಣ್ಣಿಗೆ ಹಚ್ಚಿದರೆ, ಹುಣ್ಣು ಶಮನವಾಗುತ್ತದೆ.ಅಲೋವೆರಾ ತಿರುಳನ್ನು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ.

ತಲೆನೋವಿಗೆ ಪರಿಹಾರ ಒದಗಿಸಿ ಕೊಡುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಅನೇಕರಿಗೆ ಆಗಾಗ ತಲೆನೋವಿನ ಸಮಸ್ಯೆ ಉಂಟಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಅಲೋವೆರ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ತಂಪು ಸಿಗುತ್ತದೆ ಮತ್ತು ಇದು ತಲೆನೋವಿಗೆ ಕೂಡ ಪರಿಹಾರವನ್ನು ಒದಗಿಸಿಕೊಡುತ್ತದೆ.
ಸನ್ ಬರ್ನ್, ಸುಟ್ಟ ಗಾಯಗಳು ಹಾಗೂ ಚಿಕ್ಕ ಪುಟ್ಟ ಗಾಯಗಳು ಏನಾದರೂ ಆಗಿದ್ದಲ್ಲಿ ದಿನಕ್ಕೆ ಒಂದು ಬಾರಿಯಂತೆ ಎರಡು ಮೂರು ದಿನಗಳ ಕಾಲ ಅಲೋವೆರವನ್ನು ಹಚ್ಚುವುದರಿಂದ ಗಾಯಗಳು ಕಡಿಮೆ ಆಗುತ್ತವೆ. ಪ್ರತೀ ದಿನ ಅಲೋವರವನ್ನು ಮುಖಕ್ಕೆ ಹಚ್ಚುವುದರಿಂದ ಇದು ಉತ್ತಮ ಮೊಯಿಶ್ಚರೈಸೇಷರ್ ಆಗಿ ಕೂಡ ಕೆಲಸ ಮಾಡುತ್ತದೆ.

ಅಲೋವೆರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ಗ್ರಾಮ್ ಆಗುವಷ್ಟು ಮಾತ್ರವೇ ತೆಗೆದುಕೊಳ್ಳಬೇಕು ಅದೂ ಕೊಡ ಹಕಡಿ ಬಣ್ಣದ ಲೋಳೆಯನ್ನು ಪೂರ್ತಿಯಾಗಿ ತೊಳೆದುಕೊಂಡು ತಿನ್ನಬೇಕು. ಇದರ ಜೊತೆಗೆ ನಮ್ಮ ಆಹಾರ. ವಿಹಾರ ಜೀವನ ಶೈಲಿ ಎಲ್ಲವೂ ಸಮರ್ಪಕವಾಗಿ ಇದ್ದಾಗ ಮಾತ್ರ ನಮಗೆ ಇದರ ಲಾಭ ತಿಳಿಯುತ್ತದೆ. ಅಂಗಡಿ, ಮಾಲ್ ಗಳಲ್ಲಿ ಸಿಗುವ ಅಲೋವೆರ ಜೆಲ್, ಜ್ಯೂಸ್ ಗಿಂತ ನೈಸರ್ಗಿಕಾವಾಗಿ ಸಿಗುವ ಅಲೋವೆರ ಉತ್ತಮ.

- Advertisement -

Related news

error: Content is protected !!