Thursday, May 2, 2024
spot_imgspot_img
spot_imgspot_img

ಕ್ಯಾರೆಟ್‌ನ ಆರೋಗ್ಯ ಪ್ರಯೋಜನಗಳು

- Advertisement -G L Acharya panikkar
- Advertisement -

ಮಕ್ಕಳ ಆರೋಗ್ಯಕ್ಕಂತೂ ಕ್ಯಾರೆಟ್ ಬಹಳ ಅಗತ್ಯ.
ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಕೂಡ ಇವೆ. ಬೀಟಾ ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಇರುಳಿನ ದೃಷ್ಟಿ ಸಕ್ರಿಯಗೊಳ್ಳಲು ಅದು ಅತ್ಯಾವಶ್ಯಕ. ಕ್ಯಾರೆಟ್‍ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ರಕ್ತ ಪ್ರವಾಹಕ್ಕೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಕ್ಯಾರೆಟ್‍ನಲ್ಲಿ ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟಾಶಿಯಂ, ಕಾಪರ್, ಪ್ರಾಸ್ಪರಸ್‍ನಂತಹ ಮಿನರಲ್ಸ್‍ಗಳು ಇವೆ. ನಿರ್ದಿಷ್ಟ ವಿಧದ ಕ್ಯಾನ್ಸರ್‍ಗಳ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲ ಫಾಲ್‍ಕ್ಯಾರಿನೋಲ್ ಎಂಬ ಆ್ಯಂಟಿಆಕ್ಸಿಡೆಂಟ್ ಇದೆ. ಕ್ಯಾರೆಟ್ ವಿಟಮಿನ್ ಎ ಯ ಆಗರ. ವಿಟಮಿನ್ ಎ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು. ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಇರುಳುಗಣ್ಣು ಸೇರಿದಂತೆ ದೃಷ್ಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ದೂರವಿರಬಹುದು ಮಾತ್ರವಲ್ಲ, ಅದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.

ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಮಕ್ಕಳಲ್ಲಿ ಅಕ್ಷಿಪಟಲದ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾರೆಟ್‍ನಲ್ಲಿರುವ ಬೀಟಾ ಕೆರೊಟಿನ್ ದೃಷ್ಟಿಯನ್ನು ಉತ್ತಮ ಹಾಗೂ ತೀಕ್ಷ್ಣಗೊಳಿಸಲು ಸಹಕಾರಿ. ಕ್ಯಾರೆಟ್‍ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಅದರಲ್ಲಿರುವ ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳು ಸೂರ್ಯನ ಕಿರಣಗಳಿಂದ ನಮ್ಮ ಚರ್ಮಕ್ಕಾಗುವ ಅಪಾಯಗಳಿಂದ ರಕ್ಷಿಸುತ್ತದೆ.

ಕ್ಯಾರೆಟ್‍ನಲ್ಲಿರುವ ಅಧಿಕ ಡಯೆಟರಿ ಫೈಬರ್, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ, ಮಲಬದ್ಧತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.ಮಕ್ಕಳಲ್ಲಿನ ಅತಿಸಾರವನ್ನು ಕ್ಯಾರೆಟ್ ಬಹುಬೇಗನೆ ಮತ್ತು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ಅದಕ್ಕಾಗಿ, ದಿನಕ್ಕೆ ಹಲವು ಬಾರಿ ಕ್ಯಾರೆಟ್ ಸೂಪ್ ಅಥವಾ ಜ್ಯೂಸ್ ಕುಡಿಯಿರಿ.ಕ್ಯಾರೆಟ್ ತಿನ್ನುವುದರಿಂದ, ಕರುಳಿನ ಜಂತು ಹುಳಗಳಿಂದ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಗಳಿಂದ ಪಾರಾಗಬಹುದು.

ಲಿವರ್‍ನಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ನಿವಾರಿಸಲು ಹಾಗೂ ದೇಹದಲ್ಲಿನ ವಿಷಕಾರಿ ಅಮಶಗಳನ್ನು ಹೊರ ಹಾಕಲು ಕ್ಯಾರೆಟ್ ಸಹಕರಿಸುತ್ತದೆ. ಊಟವಾದ ಬಳಿಕ ಹಸಿ ಕ್ಯಾರೆಟ್ ಜಗಿಯುವುದರಿಂದ ಹಲ್ಲನ್ನು ಅವು ಸ್ವಚ್ಚಗೊಳಿಸುತ್ತವೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತವೆ. ಹಲ್ಲು ಹುಳುಕಾಗಂತೆ ತಡೆಯುತ್ತವೆ .

- Advertisement -

Related news

error: Content is protected !!